ದೃಢ ನಿರ್ಧಾರ, ದೃಢ ಮನಸ್ಸು
1st PUC ಪ್ರವೇಶ ಪರೀಕ್ಷೆ (Entrance Test) ಬರೆದ ಕೆಲವು ಘಂಟೆಗಳಲ್ಲಿ ಅನುತ್ತೀರ್ಣ ಎಂಬ ಸುದ್ದಿ. ಮಗನನ್ನು ಭಾರತೀ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜು (BRCPUC, ಹನುಮಂತನಗರ, ಮಂಡ್ಯ ಜಿಲ್ಲೆ) ಇಲ್ಲಿಯೇ ಸೇರಿಸಬೇಕೆಂಬ ಮಹದಾಸೆ ಹೊಂದಿರುವ ಅಪ್ಪನಿಗೆ ನಿರಾಸೆ. " ಏನಯ್ಯಾ... ಇದೊಂದು ಪರೀಕ್ಷೆ ನೀನು ಪಾಸ್ ಆಗಿದ್ದಿದ್ರೆ ಚೆನ್ನಾಗಿರ್ತಿತ್ತು. ನೋಡು, ಪಾಸ್ ಆಗಿರುವ ಆ ಹುಡುಗರ ಎಲ್ಲಾ ತಂದೆಯರು ಎಷ್ಟು ಖುಷಿಯಿಂದ ಹೋಗ್ತಿದ್ದಾರೆ... " ಎಂದು ಅಪ್ಪ ನೋವಿನಿಂದ ಹೇಳಿದ ಮಾತು ಕೇಳಲು ಬಲು ಭಾರ. ಮಗ ಪ್ರವೇಶ ಪರೀಕ್ಷೆಯಲ್ಲಿ ಫೇಲ್ ಆದಾಗಿಯು ಸಹ ಏನಾದರೂ ಮಾಡಿ ಅವನನ್ನು ಇದೇ ಕಾಲೇಜಿನಲ್ಲಿ ಸೇರಿಸಬೇಕೆಂಬ ದೃಢ ನಿರ್ಧಾರ ಮಾಡಿದ್ದಾರೆ. ಕಾಲೇಜಿನಲ್ಲಿ ಅಪರಿಚಿತರನ್ನು ಮಾತನಾಡಿಸುತ್ತಾ, ಕಛೇರಿ ಕೊಠಡಿಯೊಳಗೆ ಹೋಗಿ ಬರುತ್ತಿದ್ದಾರೆ. ಸಂಜೆಯಾಯಿತು, ಅಪ್ಪನ ಮುಖದಲ್ಲಿ ವಿಫಲ ಪ್ರಯತ್ನದ ನಿರಾಸೆಯಿಂದ ಬೆಂಗಳೂರಿನ ಕಡೆಗೆ ವಾಪಸ್ಸು ಪ್ರಯಾಣ. ಮರುದಿನ ಮುಂಜಾನೆ 6.30 ರ ವೇಳೆಗೆ ಕೆ.ಎಂ.ದೊಡ್ಡಿ ಯಲ್ಲಿರುವ ಅದೇ ಸಮೂಹ ಸಂಸ್ಥೆಯ ಮತ್ತೊಂದು ಕಾಲೇಜಿನ ಪ್ರಾಂಶುಪಾಲರಾಗಿದ್ದ ಶ್ರೀ. ಹನುಮಪ್ಪ ಸರ್ ರವರ ಮನೆ ಬಳಿ ಕಾದು ನಿಂತಿದ್ದ ನಮ್ಮನ್ನು ಅವರು ಒಳಗೆ ಕರೆದರು. ಅಪ್ಪನು ತಮ್ಮ ಪರಿಚಯ ಮಾಡಿಕೊಂಡರು. ಮಗನನ್ನು ಏಕೆ ಹಾಸ್ಟೆಲ್ ನಲ್ಲಿ ಓದಿಸಲು ನಿರ್ಧಾರ ಮಾಡಿದ್ದಾರೆ ಎಂಬುದರ ಬಗ್ಗೆ ಅವರಿಗೆ ಸೂಕ್ತ ಕಾರಣಗಳನ್ನು ಕೊಟ್ಟು, " ಹ...