ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!
ಅಚ್ಚರಿ ಅನ್ನಿಸುತ್ತೆ ಅಲ್ವಾ…!
ಒಮ್ಮೆ ಕಣ್ಣು ಮುಚ್ಚಿ ನಿಮಗೆ ಗೊತ್ತಿರುವ ನಿಮ್ಮ ಸುತ್ತಮುತ್ತಲಿನ "ಆಗರ್ಭ ಶ್ರೀಮಂತ " ಕುಟುಂಬಗಳನ್ನ ನೆನಪಿಸಿಕೊಳ್ಳುತ್ತಾ ಬನ್ನಿ. ಬೆರಳೆಣಿಕೆಯಷ್ಟು ಮಾತ್ರ ಸಿಗ್ತಾರೆ ನೋಡಿ.
ಖಚಿತವಾಗಿಯೂ ಆ ಶ್ರೀಮಂತಿಕೆ ಅವರ ವಿದ್ಯಾರ್ಹತೆ ಯಿಂದ ಬಂದಿರೋದಿಲ್ಲ. ಆ ಶ್ರೀಮಂತಿಕೆ ಒಂದು ಅವರ ಸಾಮಾನ್ಯ ಜ್ಞಾನದ ಪರಿಶ್ರಮ ಅಥವಾ ಅವರ ಹಿಂದಿನ ಪೀಳಿಗೆಯಿಂದ ಕೊಡುಗೆಯಾಗಿ ಬಂದಿರುತ್ತೆ.
ಯಾವುದೇ ವಿದ್ಯಾವಂತ ವ್ಯಕ್ತಿ ತನ್ನ ವಿದ್ಯಾರ್ಹತೆ ಆದಾರದಿಂದ ಹೆಚ್ಚು ಅಂದರೆ "ಸುಖೀ-ಜೀವನ " (Luxury & Happy Life) ನಡೆಸಬಹುದು ಅಷ್ಟೇ. ಅಂದರೆ ಅಗತ್ಯ ವಸ್ತುಗಳ ಖರೀದಿಸುವ ಶಕ್ತಿ, ಒಂದು ಕಾರು, ಒಂದು ಮನೆ, ಕೊನೆಗೆ ಒಂದಿಷ್ಟು ಉಳಿತಾಯ (Savings).
"ಅಮೆರಿಕಾ-ಅಮೆರಿಕಾ" ಚಲನಚಿತ್ರ ದಲ್ಲಿ 'ಭೂಮಿ' ಪಾತ್ರ ಮಾಡಿರುವ ನಟಿ ಒಂದು ಮಾತು ಹೇಳ್ತಾರೆ ನೋಡಿ ಪಾತ್ರ-ನಟ 'ಸೂರ್ಯ' ಗೆ - "ವ್ಯವಸ್ಥೆಯು ಪ್ರಾಪಂಚಿಕ ಸೌಕರ್ಯಗಳನ್ನು ಜನರಿಗೆ ಕೊಟ್ಟು ಸುಖವಾಗಿ ಇರಿಸುತ್ತೆ. ಕೆಲವು ವ್ಯಕ್ತಿಗಳು ಸುಖವನೆಲ್ಲ ನಾನೇ ಸಂಪಾದಿಸಿದ್ದು ಅಂದುಕೊಳ್ತಾರೆ. ಆದರೆ, ಈ ಸುಖವೆನ್ನೆಲ್ಲ ವ್ಯವಸ್ಥೆ ಕೊಟ್ಟಿದ್ದು ಅಷ್ಟೇ."
ಅದ್ಭುತ ಮಾತುಗಳು.!
ಹೌದು - ವಿದ್ಯಾವಂತ ವೃತ್ತಿಪರ ವ್ಯಕ್ತಿಗಳು Loan, Credit-Card ಎಂಬ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಂಡು ಕಾರು, ಮನೆ, ಇತ್ಯಾದಿ ಏನೇ ಬೇಕಿದ್ದರೂ ಖರೀದಿಸಿ ಸುಖವಾಗಿರುತ್ತಾನೆ.
ಇದನ್ನ ಶ್ರೀಮಂತಿಕೆ ಎಂದು ಕರೆಯಲು ಸಾಧ್ಯವೇ ಇಲ್ಲ, ಅಲ್ವಾ?
ಹಾ... ನಾನು ಹೃದಯ ಶ್ರೀಮಂತಿಕೆ, ನೆಮ್ಮದಿ ಬಗ್ಗೆ ಮಾತನಾಡುತ್ತಿಲ್ಲ, "ಆಗರ್ಭ ಶ್ರೀಮಂತಿಕೆ" ಬಗ್ಗೆ ಮಾತ್ರ.
ಹಾಗಿದ್ದರೆ ಹೆಚ್ಚು ಜನರು ಸಾಮಾನ್ಯ ಜ್ಞಾನದಿಂದ ಶ್ರೀಮಂತರಾಗಬಹುದಾದರೆ ವಿದ್ಯಾವಂತಿಕೆ ಆಧಾರದ ಮೇಲೆ ಶ್ರೀಮಂತರಾಗಲು ಏಕೆ ಸಾಧ್ಯವಿಲ್ಲ?
ಅದೂ ಕೂಡ ಸಾಧ್ಯ, ಆದರೆ ಕಡಿಮೆ ಸಂಖ್ಯೆ ಮಾತ್ರ. ಇದಕ್ಕೆ ನಾನಾ ಕಾರಣಗಳಿವೆ.
ಸಾಮಾನ್ಯವಾಗಿ ವಿದ್ಯಾವಂತರು ತಮ್ಮ ವೃತ್ತಿಯಲ್ಲಿ ಬುದ್ಧಿವಂತರಿದ್ದು, ಆರ್ಥಿಕತೆಯ ಸಾಕ್ಷರತೆ ಇರುವುದಿಲ್ಲ.
ಅಂದರೆ ಪ್ರತೀ ತಿಂಗಳ ಸಂಬಳ ಅರಿವಿಲ್ಲದೆ ನೀರುಪಾಲು.
ವಿದ್ಯಾವಂತರ ಗಮನ ಸಂಬಳ ಪಡೆಯುವುದು, ಸಂಬಳ ಹೆಚ್ಚು ಮಾಡಿಕೊಳ್ಳುವುದು, ಕೆಲಸ-ಭದ್ರತೆ ನೋಡಿಕೊಳ್ಳುವುದರ ಬಗ್ಗೆ ಮಾತ್ರ ಇರುತ್ತೆ, ಬೇರೆ ಆಯಾಮಗಳಲ್ಲಿ ಯೋಚನೆ ಮಾಡೋದೇ ಇಲ್ಲ.
ಏಕೆಂದರೆ ವಿದ್ಯಾವಂತರು ಒಳ್ಳೆ ಉದ್ಯೋಗಿಗಳಾಗುತ್ತಿದ್ದಾರೆ, ಬದಲಾಗಿ ಉದ್ಯೋಗದಾತ ಆಗುತ್ತಿಲ್ಲ.
ಈ ದುರಂತಕ್ಕೆ ಕಾರಣ ನಮ್ಮ ವಿದ್ಯಾ-ವ್ಯವಸ್ಥೆಯಾ, ಪೋಷಕರಾ, ವಿದ್ಯಾರ್ಥಿಗಳಾ, ಅಥವಾ ನಮ್ಮ ಸುತ್ತಮುತ್ತಲಿನ ಮಾರ್ಗದರ್ಶಕರಾ? ಎಂಬುದು ಚರ್ಚಾಸ್ಪದ.
ವಿದ್ಯಾಭ್ಯಾಸ ಬಹು ಮುಖ್ಯ. ಅದರ ಜೊತೆಗೆ ಸಾಮಾಜಿಕ ಸಾಕ್ಷರತೆಯೂ ಕೂಡ ಅತ್ಯವಶ್ಯಕ ಅಲ್ಲವೇ?
ವಿದ್ಯಾವಂತಿಕೆನ್ನು ಶ್ರೀಮಂತಿಕೆಗೆ ಹೋಲಿಸುವುದು ಕಷ್ಟವೆ. ನನ್ನ ಪ್ರಕಾರ ವಿದ್ಯಾವಂತ ಅವಿದ್ಯಾವಂತ ಅನ್ನುವುದ್ಕಕಿಂತ ಶ್ರೀಮಂತನಾಗಲು ಧೈರ್ಯ ಬಹಳ ಮುಖ್ಯ. ಜೀವನದಲ್ಲಿ ಪಾತಾಳಕ್ಕೆ ಬೇಕಿದ್ದರೂ ಹೋಗುವ risk ತೆಗೆದುಕೊಳ್ಳುವವರಿಗೆ ಅಥವಾ backgroud support ಇದ್ದವರಿಗೆ ಶ್ರೀಮಂತನಾಗಲು ಅವಕಾಶವಿರುತ್ತದೆ.
ReplyDeleteಹೌದು ಸಾಮಾನ್ಯ ಜ್ಞಾನ ಬಹಳ ಮುಖ್ಯ.
ಧನ್ಯವಾದಗಳು ವಿನಯ್.
DeleteGood writeup. This is true.
ReplyDeleteThanks
DeleteTo become rich, a person should have knowledge, risk taker and patience.
ReplyDeleteTrue Murali.
DeleteThanks for sharing your thoughts.
Nija
ReplyDeleteಧನ್ಯವಾದಗಳು.
Deleteಈಗಿನ ಸಮಾಜದ ವಾಸ್ತವತೆಯ ಬಗ್ಗೆ ಸರಿಯಾಗಿ ಹೇಳಿದ್ದೀಯಾ ಧನ್ಯವಾದಗಳು ಹಾಗೂ ಎಲ್ಲರೂ ಸಾಮಾಜಿಕ ಜ್ಞಾನ ಮತ್ತು ಆತ್ಮ ಸ್ಥೈರ್ಯ ಧೈರ್ಯ ರೂಢಿಸಿಕೊಳ್ಳಲೇಬೇಕು ಆಗ ಮಾತ್ರ ಎಲ್ಲರೂ ಶ್ರೀಮಂತಿಕೆಯಿಂದ ಜೀವನ ಸಾಗಿಸಬಹುದು
ReplyDeleteThank you.!
Delete