ದೇಶದ ಜನರನ್ನು ಬಕ್ರ ಮಾಡುವುದು ಹೇಗೆ ಗೊತ್ತಾ...?
ಆದರೆ ಒಂದು ಅತೀ ದೊಡ್ಡ ಮತ್ತು ಕ್ಲಿಷ್ಟಕರ ಬದಲಾವಣೆಗೆ ದೇಶದಾದ್ಯಂತ ಕೋಟ್ಯಂತರ ಜನರನ್ನು ಬಕ್ರಾ ಮಾಡಿ ನಾಜೂಕಾಗಿ ಬದಲಾವಣೆಗೆ ತರುವುದು ಎಂದರೆ, ಹೇಗೆ?
ಹೌದು, ಕೇಂದ್ರ ಸರ್ಕಾರವು "ಅಭ್ಯಾಸಗಳ ಮುಖ್ಯ ಶಕ್ತಿ" (The Power Of Habit) ಏನು ಎಂಬುದನ್ನು ಚೆನ್ನಾಗಿ ಅರಿತು ಜನರಲ್ಲಿ ಬದಲಾವಣೆಗಳನ್ನು ಕಣ್ಣೊರೆಸುವ ರೀತಿಯಲ್ಲಿ ತರುತ್ತಿದ್ದಾರೆ.
ಅಭ್ಯಾಸದ ಮೂಲ: "ಸುಳಿವು -> ರೂಢಿ-> ಗಳಿಕೆ" (Clue -> Routine -> Reward)
ಮನುಷ್ಯನಿಗೆ ತನ್ನ ಅಭ್ಯಾಸಗಳ ಮೂಲಕ ಅಂತಿಮ "ಗಳಿಕೆ" ಯ ಗುರಿ ಇರುತ್ತದೆ. ತಮ್ಮ ಅಂತಿಮ ಗಳಿಕೆಯಲ್ಲಿ ಏನು ವ್ಯತ್ಯಾಸ ಕಾಣದಿದ್ದರೆ ರೂಢಿ/ವಾಡಿಕೆ ಯನ್ನು ಕಷ್ಟವಿಲ್ಲದೆ ಅನುಕರಣೆ ಮಾಡಿಕೊಳ್ಳುತ್ತಾರೆ.
ಹೌದು, ಈ ತಂತ್ರ ಅರಿತಿರುವ ಕೇಂದ್ರ ಸರ್ಕಾರವು ಅಡುಗೆ ಅನಿಲ ಖರೀದಿಯ ರೂಢಿ/ವಾಡಿಕೆ ಯನ್ನು ದೇಶದ ಜನರಲ್ಲಿ ಬದಲಾವಣೆ ತಂದಿದೆ.
ಅಡುಗೆ ಅನಿಲದ ಮೇಲಿನ ರಿಯಾಯಿತಿ (Subsidy) ದರವನ್ನ ಬಳಕೆದಾರರ ಖಾತೆ ಗೆ ವರ್ಗಾವಣೆ ಮಾಡುತ್ತೇವೆ, ಆದರೆ ಜನರು ಮೊದಲು ಪೂರ್ತಿ ಮೊತ್ತ ಕೊಟ್ಟು ಖರೀದಿ ಮಾಡಬೇಕು ಎಂದಿತು.
ಜನರಿಗೆ ಸ್ವಲ್ಪ ಕಷ್ಟ ಎನ್ನಿಸಿದರು ತಮ್ಮ "ರೂಢಿ" ಯನ್ನು ಬದಲಿಸಿ ವಿನಾಯಿತಿ ರಹಿತ ಹಣ ಕೊಟ್ಟು ಖರೀದಿ ಮಾಡಿದರು.
ಏಕೆಂದರೆ ತಮಗೆ ಸಿಗಬೇಕಾದ "ಗಳಿಕೆ" ಯಲ್ಲಿ ಏನೂ ವ್ಯತ್ಯಾಸ ಕಾಣಲಿಲ್ಲ. ಸ್ವಲ್ಪ ತಡವಾದರೂ ಬರುತ್ತೆ ಎಂಬ ವಿಶ್ವಾಸವಿತ್ತು. ಹಾಗಾಗಿ ದೇಶದಾದ್ಯಂತ ಎಲ್ಲಾ ವರ್ಗದ ಕೋಟ್ಯಂತರ ಜನರು ಹಲವಾರು ವರ್ಷಗಳಿಂದ ಇದ್ದ ರೂಢಿಯನ್ನ ಯಾವುದೇ ಹೋರಾಟ ಮಾಡದೆ "ಬದಲಾವಣೆ" ಮಾಡಿಕೊಂಡರು.
ಕೆಲವೇ ತಿಂಗಳುಗಳಲ್ಲಿ ಜನರು ಪೂರ್ತಿ ಹಣ ಕೊಟ್ಟು ಅಡುಗೆ ಅನಿಲ ಸಿಲಿಂಡರ್ ಖರೀದಿಸುವ ರೂಡಿಗೆ ಬಿದ್ದುಬಿಡುತ್ತಾರೆ.
ಅಲ್ಲಿಗೆ, ಕೇಂದ್ರ ಸರ್ಕಾರದ ಯೋಜನೆ ಅರ್ಧ ಮಟ್ಟಿಗೆ ಯಶಸ್ವಿಯಾಯಿತು.
ಕೆಲ ತಿಂಗಳುಗಳ ನಂತರ ತಾಂತ್ರಿಕ ಕಾರಣ ಕೊಟ್ಟು ರಿಯಾಯಿತಿ ಹಣ ತಡವಾಗಿ ಹಾಕುವ ಮೂಲಕ ರಿಯಾಯಿತಿ ಹಣದ ಅವಲಂಬಿತವನ್ನು ಜನರಿಂದ ನಿಧಾನವಾಗಿ ಕಿತ್ತೊಗೆದರು.ಇಲ್ಲಿಗೆ ಕೇಂದ್ರ ಸರ್ಕಾರದ ಯೋಜನೆ ಪೂರ್ಣವಾದಂತೆ ಆಯಿತು.
ನಂತರ ಸ್ವಇಚ್ಚೆಯಿಂದ ರಿಯಾಯಿತಿ ತೊರೆಯುವ ಯೋಜನೆ (Subsidy Give Up).
ಇದನ್ನ ಯಶಸ್ವಿಗಳಿಸೋಕೆ ಜನರಲ್ಲಿ ಒಂದು Reward/ಗಳಿಕೆ ಯ ಆಸೆ ತೋರಿಸಿದರು. ಅದುವೇ "ಪ್ರಶಂಸೆ" - ದೇಶದ ಪ್ರಗತಿಗೆ ನಿಮ್ಮ ನಿಸ್ವಾರ್ಥ ತ್ಯಾಗ ಎಂಬ ಪ್ರಶಂಸೆ. ಲಕ್ಷಾಂತರ ಮಂದಿ ಪ್ರಶಂಸೆ ಗಳಿಕೆಯ ದುಂಬಾಲು ಬಿದ್ದು ಸ್ವಇಚ್ಛೆಯಿಂದ ರಿಯಾಯಿತಿ ತ್ಯಾಗ ಮಾಡಿದರು.
ಇದರ ನಂತರ ಮಿಕ್ಕ ಜನರಿಗೆ ಅರಿವು ಆಗಿರುತ್ತೆ ಕೂಡ, ನಮಗೆ ಸಿಗುತ್ತಿರುವ ರಿಯಾಯಿತಿ ನಮ್ಮ ಅದೃಷ್ಟ ದ ಲಾಭವಷ್ಟೇ ಎಂದು. ತಿಂಗಳುಗಳು ಕಳೆದಂತೆ ಕೇಂದ್ರ ಸರ್ಕಾರ ಏನೂ ಕಾರಣ ಕೊಡದೆ ಲಕ್ಷಾಂತರ ಜನರ ರಿಯಾಯಿತಿಯನ್ನು ಕಾರಣ ಕೊಡದೆ ನಿಲ್ಲಿಸಿದೆ.
ಈಗ ರಿಯಾಯಿತಿ ಬರುತ್ತಿರುವುದು ಕೆಲವೇ ಜನರಿಗೆ ಮಾತ್ರ.
ನಾವೆಲ್ಲರೂ ಸಣ್ಣ ಸಣ್ಣ ಬದಲಾವಣೆ ಮಾಡಿಸಲು ಅಥವಾ ಮಾಡಿಕೊಳ್ಳಲು ಸಾಧ್ಯವಾಗೋದಿಲ್ಲ.
ಅಂತಹುದರಲ್ಲಿ ಇಡೀ ದೇಶದಲ್ಲಿ ಇದರ ಬಗ್ಗೆ ಪ್ರಬಲ ಹೋರಾಟಕ್ಕೂ ಕಾರಣ ಸಿಗದಂತೆ ಕೋಟ್ಯಂತರ ಜನರನ್ನು ಎಷ್ಟು ಸುಲಭಾಗಿ ಬದಲಾವಣೆಯ ಅನುಕರಣೆ ಮಾಡಿಸಿದ್ದಾರೆ ನೋಡಿ.
- ರಾಘವೇಂದ್ರ. ಜಿ. ಶ್ರೀರಾಮಯ್ಯ
9060660060
Its true
ReplyDeleteVery good Ragu namma Ragu barahagara lekaka aguthiddane ege baretha eru very good👍
ReplyDelete