ಕ್ಷಮಿಸಿ ರೈತರೇ - ನಮ್ಮೆಲ್ಲರ ಕರ್ಮ


ಕೆಲ ತಿಂಗಳ ಹಿಂದೆ ನನ್ನ ಬಾಲ್ಯ ಸ್ನೇಹಿತ ಟೊಮೊಟೊ ಬೆಳೆ ಬೆಳೆದು, ಸಮೀಪದ ಚಿಕ್ಕಬಳ್ಳಾಪುರ ಮಾರ್ಕೆಟ್ ನಲ್ಲಿ ಕಿಲೋ ಗೆ 5 ರೂಪಾಯಿಯಂತೆ ಟನ್ ಗಟ್ಟಲೆ ಟೊಮೊಟೊ ಮಧ್ಯವರ್ತಿಗಳಿಗೆ ಮಾರಿ ಬರುತ್ತಿದ್ದ.

ಅದೇ ದಿನಗಳಲ್ಲಿ ಬೆಂಗಳೂರಿನಲ್ಲಿ ಕೆ.ಜಿ. ಗೆ 30 ರೂಪಾಯಿ ಇತ್ತು. ಒಂದೆರಡು ಅಂಗಡಿಗಳಲ್ಲಿ ವಿಚಾರಿಸಿ ಸ್ವತಃ ನಾನೇ ಖರೀದಿಸಿ ಇಲ್ಲಿನ ಬೆಲೆ ಹೇಗಿದೆ ಎಂದು ತಿಳಿಸಲಿಕ್ಕೆ ತರಕಾರಿ ಕೊಂಡ ಬಿಲ್ ಅವನಿಗೆ ವಾಟ್ಸಾಪ್ ಮಾಡಿದೆ.

ತಕ್ಷಣ ಅವನು "ಎನ್ ಗುರು ಇದು... ಎಷ್ಟೋ ರೈತರು ಬೆಳೆದ ಟೊಮೊಟೊ ಮಾರ್ಕೆಟ್ ನಲ್ಲಿ ಯಾರೂ ಕೊಳ್ಳದೆ ರಸ್ತೆಯಲ್ಲಿ ಸುರಿಯುತ್ತಿದ್ದಾರೆ. ಬೆಂಗಳೂರಲ್ಲಿ ಇಷ್ಟೊಂದು ರೇಟ್ ಇದೆಯಾ" ಅಂದುಕೊಂಡು ಬೇಸರದಿಂದ ಅಸಹಾಯಕತೆ ವ್ಯಕ್ತಪಡಿಸಿದ. ಇದು ಒಬ್ಬ ರೈತನ ಅಥವಾ ಒಂದು ಬೆಳೆಯ ಕಥೆಯಲ್ಲ. ಬೆಳೆದ ಫಸಲುಗಳಿಗೆ ಸರ್ಕಾರದ ಬೆಂಬಲ ಬೆಲೆ ಇಲ್ಲದೆ ಹೆಚ್ಚು ಕಡಿಮೆ ಎಲ್ಲಾ ರೈತರ ವ್ಯಥೆ ಇದಾಗಿದೆ.

ರೈತರು ಬೆಳೆದ ಫಸಲು ರೈತರೇ ನೇರವಾಗಿ ಮಾರಾಟ ಮಾಡಲು ಅವಕಾಶ ಮಾಡಿಕೊಡುವ ಪರಿಕಲ್ಪನೆಯಿಂದ "ರೈತರ ಸಂತೆ" ಎಂಬುದನ್ನ ಸರ್ಕಾರ ಮಾಡಿದೆ. ಆದರೆ ಈಗ ಅದು ದಲ್ಲಾಳಿಗಳ ಸಂತೆ ಆಗಿದೆ - ಅಲ್ಲಿ ಮಾರಾಟ ಮಾಡುತ್ತಿರುವ ಎಲ್ಲರೂ ಮಧ್ಯವರ್ತಿಗಳೇ.

"ನಮ್ಮದು ಕೃಷಿ ಪ್ರಧಾನ ದೇಶ, ರೈತ ಈ ದೇಶದ ಬೆನ್ನೆಲುಬು - ಅವರ ಏಳಿಗೆಗಾಗಿ ಮಹತ್ತರ ಕಾಯ್ದೆಗಳು ತಂದಿದ್ದೇವೆ" ಎಂದು ಕಣ್ಣೊರೆಸುವ ಮಾತುಗಳಾಡುತ್ತ ಮಾಧ್ಯಮಗಳ ಎದುರು ಬೊಗಳೆ ಬಿಡ್ತಾರೆ. ಸುಧಾರಣೆ ಆಗಿದ್ದೆಲ್ಲಿ, ಸ್ವಾಮಿ...?

ಕಾಲದಿಂದಲೂ ದೇಶದಲ್ಲಿ ಆಹಾರ ಕೊರತೆ ನೀಗಿಸುತ್ತಿರುವ ರೈತಾಪಿ ವರ್ಗದ ಬಲವರ್ಧನೆ ಮಾಡುವ ದಿಶೆಯಲ್ಲಿ ಯಾರೂ ದಿಟ್ಟತನದ ಸಂಕಲ್ಪ ಮಾಡಲೇ ಇಲ್ಲ.

ಪ್ರಪಂಚದ ಅತೀ ದೊಡ್ಡ ರೈತರ ಪ್ರತಿಭಟನೆ ನಿರಂತರವಾಗಿ ನಡೀತಿದ್ರು, ಅದೇನೋ ಹೊಸ ಕಾಯ್ದೆಯಂತೆ... ನನಗೆ ಅದು ಅಸಂಬದ್ಧ ಎಂಬಂತೆ ನಾವೆಲ್ಲರೂ ಮೂಕ ಪ್ರೇಕ್ಷಕರಾಗಿದ್ದೇವೆ. ಆ ಕಾಯ್ದೆಗಳ ಸಾಧಕ-ಭಾದಕಗಳ ಒಳ ಅರ್ಥ ತಿಳಿದುಕೊಳ್ಳುವ ಗೋಜಿಗೂ ಹೋಗುತ್ತಿಲ್ಲ. ಸರಿ ಇದ್ದದ್ದನ್ನು ಒಪ್ಪೋಣ, ತಿಳಿಯಪಡಿಸೋಣ. ಯಾವುದೋ ಒಂದಿಷ್ಟು ಮಾರಕವಾಗಬಹುದು ಎಂಬುದು ಕಂಡಾಗ ತಿದ್ದುಪಡಿಗೆ ಪ್ರತಿಭಟಿಸೋಣ.

ರೈತರ ಪ್ರತಿಭಟನೆ ಬೆಂಬಲಿಸಿದರೆ ದೇಶ ವಿರೋಧಿ ಎಂಬ ಹೆಸರು ಬಂದಿತೇನೋ ಎಂಬ ಭಯ ಅಥವಾ ಇವನು ವಿರೋಧ ಪಕ್ಷದವನು ಎಂಬ ಪಟ್ಟ ಹೊರಬೇಕಾದೀತು ಎಂಬ ಆತಂಕ ಕೆಲವರಲ್ಲಿ ಇದೆ ಅನ್ಸುತ್ತೆ.

ರೈತರು ದೇಶಕ್ಕೆ ಜೀತವಾಗಿಬಿಟ್ಟಿದ್ದಾರೆ ಎಂಬ ಕಲ್ಪನೆ ರಾಜಕಾರಣಿಗಳ ಮನದಲ್ಲಿ ಇದೆಯೋ ಏನೋ... ಗೊತ್ತಿಲ್ಲ.

ಉಳ್ಳವರು ಸಮಯಕ್ಕೆ ಸರಿಯಾಗಿ ಮೃಷ್ಟಾನ್ನ ಭೋಜನ ತಿಂದು-ತೇಗಿದಾಗಲು ಆ ಅನ್ನದ ಕಾರಣೀಕೃತ ಅನ್ನದಾತನ ನೆನೆಯುವುದಿಲ್ಲ ಅಥವಾ ಅವನ ಕಷ್ಟ ಕಾಲದಲ್ಲಿ ಬೆಂಬಲಿಸುವುದಿಲ್ಲ. ಅವನ ಋಣದಲ್ಲೇ ನಾವೆಲ್ಲರೂ ಒಂದು ದಿನ ಸಾಯುತ್ತೇವೆ ಅಷ್ಟೇ.

ಕೆಲಸಕ್ಕೆ ಬಾರದೆ ಇರೋ ಕೆಲ ವ್ಯಕ್ತಿಗಳಿಗೆಲ್ಲ ಅಭಿಮಾನಿಗಳು, ಬೆಂಬಲಿಗರು ಅಂತ ಇರ್ತಾರೆ. ಆದರೆ, ನಮ್ಮ ರೈತ ವರ್ಗಕ್ಕೆ ಯಾವೊಬ್ಬ ನರಪಿಳ್ಳೆಯ ಅಭಿಮಾನವೂ ಇಲ್ಲ, ಬೆಂಬಲವೂ ಇಲ್ಲ. ಅವನ ಜೀವನಕ್ಕಾಗಿ ಅವನೇ ಬಡಿದಾಡಿಕೊಂಡು ಸುಸ್ತಾಗಿ ಸುಣ್ಣವಾಗ್ತಿದ್ದಾನೆ.

ಇದೇ ರೈತನ ಬಳಿ ಕೋಟಿಗಟ್ಟಲೆ ದುಡ್ಡಿದ್ದು ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದ ತಕ್ಷಣ ತನ್ನದೇ ಆದ ಅಭಿಮಾನಿಗಳು, ಬೆಂಬಲಿಗರು ರಾತ್ರೋರಾತ್ರಿ ಪ್ರತ್ಯಕ್ಷವಾಗುತ್ತಾರೆ. ಇದರ ಹೆಚ್ಚಿನ ವಿವರಕ್ಕಾಗಿ ಈ 👉 ಲೇಖನ ಓದಿ.

ಅಣ್ಣಾ ಹಜಾರೆ ಯವರ ಹೋರಾಟದ ಸಮಯದಲ್ಲಿ ದೇಶದಾದ್ಯಂತ ಚಳವಳಿಗಳು ನಡೆದಿಲ್ಲವೇ? 
ಯುವ ಸಮೂಹ, ವಿದ್ಯಾರ್ಥಿ ಬಳಗ, ಕಾರ್ಮಿಕ ಕ್ಷೇತ್ರ, ರೈತಾಪಿ ವರ್ಗ, ಇತ್ಯಾದಿ... ಎಲ್ಲರೂ ಏಕಚಿತ್ತತೆಯಿಂದ ಬೆಂಬಲ ಸೂಚಿಸಿಲ್ಲವೇ?
  • ಈ ಅಮಾಯಕ, ಅಸಹಾಯಕ ರೈತ ವರ್ಗದ ಬಗ್ಗೆ ಯಾರೂ ಚಿಂತಿಸುತ್ತಿಲ್ಲವೇಕೆ...?
  • ದೇಶದ ಬೆನ್ನೆಲುಬು ಬಾಗಿ ಬೆಂಡಾಗುತ್ತಿದ್ದರು ಊರುಗೋಲಿನ ಬೆಂಬಲವಿಲ್ಲವೇಕೆ...?
ರೈತರಿಂದ ನಾವುಗಳು ಎಂಬ ಮನಸ್ಥಿತಿ ಬೇಕಿದೆ ಅಷ್ಟೇ. ಈಗಿನ ಜನರ ಮನಸ್ಥಿತಿ ಹಾಗಿಲ್ಲ ಬಿಡಿ... 

🙏 ಕ್ಷಮಿಸಿ ರೈತರೇ 🙏


- ರಾಘವೇಂದ್ರ. ಜಿ. ಶ್ರೀರಾಮಯ್ಯ
9060660060             



Comments

  1. Well said Anna. Farmers are really in trouble, but nobody cares

    ReplyDelete
  2. Very true, it's unfortunate that even our own farmers are also not standing up in support for the strike at centre.

    ReplyDelete
  3. The middleman get more money than farmer

    ReplyDelete
  4. Nija Raitha na kasta kea pratipla sigtila

    ReplyDelete
  5. Raitha snehi Nayaka CM adre ne idakke parihaara.....yest dodda horatagaara adru Adhikara illa Andre enu madoke aagalla...hagaagi raytru ond kade Seri obba dheemantha nayakana aayke Maadi avana bagge saamanya janarige arivu moodisi CM maadbeku.......aagle idakke parihaara.......sumne hortamaadidre kavade kaasina kimattu sigalla raytru haagu saamanya janarige....Namma mushti yalli Namma rajya irbeku....Namma rajya naavu kapodko beku....SARKARA ENADRU MAADBEKU ANTHA YAVATHU KAAYBARDU....NAAAVE SARKARA AAGBEKU MATTHU BADALAAVANE THARBEKU.

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಹೇಗಿದ್ದಾರೆ ಮೇಷ್ಟ್ರು..?

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

ಸಾರ್ಥಕ ನಿವಾಸ

ಮನೋಜ್ಞ ಮಾದರಿ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ

ದೃಢ ನಿರ್ಧಾರ, ದೃಢ ಮನಸ್ಸು

ಅಮುಲ್ ಗೆ ವಿರೋಧವೇಕೆ, ನಂದಿನಿ ಗೆ ಬೆಂಬಲ ಬೇಕೆ?