ಅಸಲಿ ರೈತ, ನಕಲಿ ಪ್ರೀತಿ.!


ನಕಲಿ ರೈತರು...!? - ಈ ಮಾತು ಇತ್ತೀಚೆಗೆ ತುಂಬಾ ಪ್ರಚಲಿತದಲ್ಲಿ ಇತ್ತು. ಒಂದು ವರ್ಷದಿಂದ ನಿರಂತರವಾಗಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ರಾಜಕೀಯ ಬಣ್ಣ ಬಳೆದು "ಪ್ರತಿಭಟನೆ ಮಾಡುತ್ತಿರುವವರು ನಕಲಿ ರೈತರು" ಎಂದು ಸರ್ಕಾರದ ಪ್ರತಿನಿಧಿಗಳೇ ಹೇಳಿದ್ದರು.
  • ನಿನ್ನೆಯ ದಿನ ದೇಶದ ಪ್ರಧಾನಿಯೇ ಬಂದು ರೈತರ ಕ್ಷಮೆಯಾಚಿಸಿ ಕಾಯ್ದೆಗಳನ್ನ ವಾಪಸ್ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ. ಅವರು ಹೇಳಿದ ಪ್ರಕಾರ "ಕಾಯ್ದೆಗಳು ಮಾಡಿದ್ದು ರೈತರ ಉದ್ದಾರಕ್ಕಾಗಿ, ಆದರೆ ಹಿಂಪಡೆಯುತ್ತಿರುವುದು ದೇಶಕ್ಕಾಗಿ' - ಈ ಮಾತನ್ನು ಹೇಗೆ ವ್ಯಾಖ್ಯಾನಿಸಬೇಕು?
  • ರೈತರ ಉದ್ದಾರಕ್ಕೆಂದೇ ಮಾಡಿದ್ದ ಕಾಯ್ದೆಗಳು ಅಂದಮೇಲೆ ವಾಪಸ್ ಪಡೆಯುವ ಬದಲು, ಲೋಪವಿದ್ದ ಕೆಲವು ಕಾನೂನುಗಳನ್ನು ಸರಿಪಡಿಸಲಿಲ್ಲವೇಕೆ?
  • ನಿಮ್ಮ ಪ್ರಕಾರ ಕಾಯ್ದೆಗಳನ್ನ ವಿರೋಧ ಮಾಡುತ್ತಿರೋದು ಕೇವಲ 1% ನಕಲಿ ರೈತರು ಮಾತ್ರ. ಹಾಗಿದ್ದರೆ, 99% ಅಸಲಿ ರೈತರ ಬೆಂಬಲ ನಿಮಗೆ ಸಿಗುತ್ತದೆ ಎಂಬ ಭರವಸೆ ಮೂಡಲಿಲ್ಲವೇಕೆ?
  • ಸತ್ಯವಾಗಿಯೂ ಅದು ನಕಲಿ ರೈತರ ಹೋರಾಟವೇ ಎಂದು ತಮಗೆ ಖಾತ್ರಿಯಾಗಿದ್ದಲ್ಲಿ ಆ ಕೆಲವೇ ನಕಲಿಯರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಾಗಿಲ್ಲವೇಕೆ?
  • ಈ ಹೋರಾಟದಲ್ಲಿ 700 ಬಡ ರೈತರು ಮೃತಪಟ್ಟಿದ್ದಾರೆ ಅಲ್ವಾ, ಇವರಲ್ಲಿ ಎಷ್ಟು ನಕಲಿ ರೈತರಿದ್ದಾರೆ ತೋರಿಸಿ ನೋಡೋಣ?
  • ನಮ್ಮ ಗ್ರಾಮದಿಂದಲೂ ಬೇಸಾಯ ಮಾಡುವ ರೈತರು ಹಲವಾರು ಬಾರಿ ಈ ಹೋರಾಟದಲ್ಲಿ ಭಾಗವಹಿಸಿದ್ದರು. ಇವರೆನ್ನೆಲ್ಲ ನಕಲಿ ಎಂದು ಹೇಗೆ ಬಣ್ಣಿಸುತ್ತೀರಿ?
  • ಮುಂದಿನ ದಿನಗಳಲ್ಲಿ ರೈತರಿಂದ ರಾಜಕೀಯ ದೃವೀಕರಣ ಆಗಬಹುದು ಎಂಬ ಲೆಕ್ಕಾಚಾರ ಮಾಡಿಯೇ ಕಾಯ್ದೆಗಳನ್ನ ವಾಪಸ್ ಪಡೆಯಲಾಯಿತೆ?
  • ಹಾಗಿದ್ದರೆ ಇದು ಅಸಲಿ ರೈತರ ಮೇಲೆ ಸರ್ಕಾರಕ್ಕೆ ಇರುವುದು "ನಕಲಿ ಪ್ರೀತಿ" ಅನ್ನಿಸೋದಿಲ್ವಾ?
ಸಣ್ಣ-ಇಳುವರಿ ರೈತರೇ ದೇಶಕ್ಕೆ ಆಹಾರ ಪೂರೈಕೆಯ ಬೆನ್ನೆಲುಬಾಗಿ ನಿಂತಿರುವಾಗ - ಈ ರೈತಾಪಿ ವರ್ಗಕ್ಕೆ ಮಾರಕವಾಗದಂತಹ ಸುಧಾರಣೆಗಳು ಖಂಡಿತವಾಗಿಯೂ ಆಗಬೇಕಿವೆ. ಈ ವಿಷಯದಲ್ಲಿ ಸರ್ಕಾರಗಳು ತಮ್ಮ ಪಕ್ಷಕ್ಕೆ ಲಾಭ-ನಷ್ಟದ ಲೆಕ್ಕಾಚಾರ ಮಾಡಕೂಡದು ಎಂಬುದು ನನ್ನ ಅನಿಸಿಕೆ.

ರೈತರ ಬಗೆಗಿನ ದೊರಣೆ ಕುರಿತು ನನ್ನ ಹಿಂದಿನ ಲೇಖನ ಓದಿ 👉 "ಕ್ಷಮಿಸಿ ರೈತರೇ - ನಮ್ಮೆಲ್ಲರ ಕರ್ಮ"

- ರಾಘವೇಂದ್ರ. ಜಿ. ಶ್ರೀರಾಮಯ್ಯ
 9060660060           

Comments

  1. So true, and the timings of the announcement just before the heat of UP and Punjab election makes their intentions very clear.

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಹೇಗಿದ್ದಾರೆ ಮೇಷ್ಟ್ರು..?

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

ಸಾರ್ಥಕ ನಿವಾಸ

ಮನೋಜ್ಞ ಮಾದರಿ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ

ದೃಢ ನಿರ್ಧಾರ, ದೃಢ ಮನಸ್ಸು

ಅಮುಲ್ ಗೆ ವಿರೋಧವೇಕೆ, ನಂದಿನಿ ಗೆ ಬೆಂಬಲ ಬೇಕೆ?