ಕನ್ನಡ ಭಾಷ್ಯೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ...!

ನಾವೆಲ್ಲರು ಸಾಮಾನ್ಯವಾಗಿ ನವೆಂಬರ್ 1 ರಂದು "ಕನ್ನಡ ರಾಜ್ಯೋತ್ಸವ" ಎಂದು ಉಚ್ಛರಿಸುವುದು ಲೋಕರೂಢಿ ಆಗಿಬಿಟ್ಟಿದೆ. ಇದನ್ನ ವಿಂಗಡಿಸಿ ಬರೆಯುವುದಾದರೆ -
ಕನ್ನಡ + ರಾಜ್ಯ + ಉತ್ಸವ
'ಕನ್ನಡ' ಎಂಬುದು ನಮ್ಮ ಭಾಷೆ, ಅದು ರಾಜ್ಯವಲ್ಲ.! (ಸರಿಗನ್ನಡಂ ಗೆಲ್ಗೆ).!

ಇತಿಹಾಸ ನೋಡುವುದಾದರೆ; ಕನ್ನಡ ಭಾಷಿಕರ ಪ್ರಾಂತ್ಯಗಳನ್ನ ಒಗ್ಗೂಡಿಸಿ ನವೆಂಬರ್ 1 ರಂದು ಕರ್ನಾಟಕ ರಾಜ್ಯವಾಗಿ ಏಕೀಕರಣಗೊಳಿಸಿದ ದಿನ. ಹಾಗಾದರೆ ನಾವು ಆಚರಿಸಬೇಕಿರುವುದು.
 ಕರ್ನಾಟಕ  ರಾಜ್ಯೋತ್ಸವ
ರ್ನಾಟಕ + ರಾಜ್ಯ + ಉತ್ಸವ
ಈ ದಿನದ ಸಾಂಕೇತಿಕ ಆಚರಣೆ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ರಾಜ್ಯ ಏಕೀಕರಣಗೊಳಿಸಿದ ಸಾಧನೆ, ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಯಪಡಿಸಬೇಕಾಗಿದೆ. ಕರ್ನಾಟಕ ರಾಜ್ಯದಲ್ಲಿ ಕನ್ನಡ, ಕೊಂಕಣಿ, ತುಳು ಎಲ್ಲಾ ಭಾಷೆಗಳನ್ನು ಒಳಗೊಂಡಿದೆ.

ಭಾಷೆಯ ಇತಿಹಾಸ ನೋಡುವುದಾದರೆ; ಪ್ರಾಚೀನ ಇತಿಹಾಸ ಇರುವ ನಮ್ಮ ಕನ್ನಡ ಭಾಷೆಗೆ ವಿಶೇಷ ಸ್ಥಾನಮಾನ
ಕೊಡಿಸಲು ನಮ್ಮ ಪೂರ್ವಜರು ಅನೇಕ ಚಳುವಳಿಗಳನ್ನ ನಡೆಸಿ ಕನ್ನಡಕ್ಕೆ ಪ್ರಮುಖ ಸ್ಥಾನಮಾನ ದೊರಕಿಸಿಕೊಟ್ಟಿದ್ದಾರೆ. ಈ ವಿಚಾರದಲ್ಲಿ ಕವಿ ವಿ.ಕೃ.ಗೋಕಾಕ್, ವರನಟ ಡಾ. ರಾಜಕುಮಾರ್ ಹಾಗೂ ಹಲವು ಗಣ್ಯರ ಸ್ಮರಣೆ ಮಾಡಲೇಬೇಕು.

ಕನ್ನಡಿಗರಾದ ನಾವು ಕನ್ನಡ ಭಾಷೆಯ ಬಳಕೆ ಕಡಿಮೆ ಮಾಡಿದರೆ ಭಾಷೆಯ ಹಿಡಿತ, ಸಂಸ್ಕೃತಿ ಎಲ್ಲವೂ ಕಾಲಕ್ರಮೇಣ ನಶಿಸಬಹುದು.
ಅನಾದಿ ಕಾಲದಿಂದಲೂ ಕನ್ನಡ ಪ್ರಾಂತ್ಯಗಳನ್ನ ಅಳುತ್ತಿದ್ದ ಕನ್ನಡೇತರರು ತಮಗೆ ಅರ್ಥವಾಗುವ ಭಾಷೆಯನ್ನೇ ಆಡಳಿತದಲ್ಲಿ ಏರುವುದು ರೂಢಿಯಾಗಿದೆ. ಈ ರೀತಿ "ಬಲವಂತದ ಅನ್ಯ-ಭಾಷೆ ಬಳಕೆ/ಹೇರಿಕೆ" ನಮ್ಮ ರಾಜ್ಯದಲ್ಲಿ ಕಾಣದ ಕೈಗಳಿಂದ ಈಗಾಗಲೇ ಅಲ್ಲಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುವ ಆತಂಕವಂತೂ ಇದೆ.

ಆದ್ದರಿಂದ ಕನ್ನಡ ಭಾಷೆ ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಕ್ಷೇತ್ರ, ವರ್ಗಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಕೆ ಮಾಡಬೇಕು. ಸಾಧ್ಯವಾದಲ್ಲಿ ಅನ್ಯ-ಭಾಷಿಕರಿಗೆ ಕನ್ನಡ ಕಲಿಸುತ್ತ... ಕನ್ನಡ ಭಾಷೆಯ ಅಸ್ತಿತ್ವ ಮುಂದಿನ ಪೀಳಿಗೆಗೆ ಬಲವಾಗಿ ಕಟ್ಟಿಕೊಡುವ ಜವಾಬ್ದಾರಿ ನಮ್ಮೆಲ್ಲರದ್ದು. 
ಹೀಗೆ ಮಾಡಬೇಕಾದರೆ ವರ್ಷಪೂರ್ತಿ ನಾವು ಅನುಭವಿಸಿ ಆನಂದಿಸಬೇಕಿರುವುದು -
ಕನ್ನಡ ಭಾಷ್ಯೋತ್ಸವ = ಕನ್ನಡ + ಭಾಷೆ + ಉತ್ಸವ

ಸರ್ವರಿಗೂ "ಕರ್ನಾಟಕ ರಾಜ್ಯೋತ್ಸವ" ದ ಶುಭಾಶಯಗಳು.
ಜೈ ಕರ್ನಾಟಕ

 - ರಾಘವೇಂದ್ರ. ಜಿ. ಶ್ರೀರಾಮಯ್ಯ
9060660060           




Comments

  1. From SN Lakshmi Narayan Sir (via What's App):

    ಸರಿಯಾದ ನಿಲುವು.

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

ಹೇಗಿದ್ದಾರೆ ಮೇಷ್ಟ್ರು..?

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಸಾರ್ಥಕ ನಿವಾಸ

ಅಪ್ಪಾ... Ex-MP ಎಂದರೇನು?

ದೃಢ ನಿರ್ಧಾರ, ದೃಢ ಮನಸ್ಸು

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ