ಸಾರ್ಥಕತೆಯ ಬದುಕು

ನಮ್ಮೆಲ್ಲರ ಮನದಲ್ಲಿ ಪ್ರೀತಿಯ ಅಪ್ಪುಗೆಯಂತಿದ್ದ ಅಪ್ಪು ಇನ್ನಿಲ್ಲ ಎಂಬುದು ನಮ್ಮೆಲ್ಲರ ದೌರ್ಭಾಗ್ಯ.

ಸ್ನೇಹಿತನಲ್ಲ, ರಕ್ತ ಸಂಬಂಧಿಯಲ್ಲ ಆದರೂ ಕೋಟ್ಯಂತರ ಹೃದಯಗಳಲ್ಲಿ ಮುಗ್ಧವಾಗಿ ಮಲಗಿದ್ದ ಪರಿಪೂರ್ಣ ವ್ಯಕ್ತಿತ್ವ ಅದು. ಅವರ ಬಗ್ಗೆ ಜನರು ತೋರುತ್ತಿರುವ ಅಕ್ಕರೆ-ಅಭಿಮಾನ, ಪ್ರೀತಿ ನೋಡುತ್ತಿದ್ದರೆ ಅನ್ನಿಸುತ್ತೆ - ಅವರದು ಸಾರ್ಥಕತೆಯ ಬದುಕು
ಈ ಸಾರ್ಥಕತೆಯ ಬದುಕು/ಜೀವನ ಹೇಗೆ ಸಾಧ್ಯ?

ಇವರು ನಮ್ಮ ದೊಡ್ಮನೆ ಹುಡುಗ, ಅಥವಾ ಒಳ್ಳೆಯ ಕಲಾವಿದ, ಅಥವಾ ಸಮಾಜಸೇವಕ ಎಂಬ ಮಾತ್ರಕ್ಕೆ ಇಷ್ಟೊಂದು ಪ್ರೀತಿ ಪಾತ್ರರಾಗಿಲ್ಲ. ಹಾಗೆ ನೋಡಿದರೆ ಅವರ ಸಮಾಜ ಸೇವೆಗಳು ಅಗಲಿಕೆ ಮುನ್ನ ಎಷ್ಟೋ ಜನರಿಗೆ ತಿಳಿದೇ ಇರಲಿಲ್ಲ. ಚಿಕ್ಕ-ಪುಟ್ಟ ಮಕ್ಕಳಿಗೆ ಸಹಾಯ, ಸಾಧನೆ ಎಂಬುಗಳ ಬಗ್ಗೆ ಅರಿವೇ ಇರೋದಿಲ್ಲ. 
ಹಾಗಾದರೆ ಇಷ್ಟೊಂದು ಪ್ರೀತಿ ಗಳಿಸಲು ಹೇಗೆ ಸಾಧ್ಯ?

ಮನುಷ್ಯನಿಗೆ ವೈಯುಕ್ತಿಕ ಕಲೆ, ಸಂಪತ್ತು, ಹಿಂದಿನ ಪೀಳಿಗೆಯ ಹೆಗ್ಗಳಿಕೆ ಇವೆಲ್ಲವೂ ಇದ್ದಾಗ ಸಾಮಾನ್ಯವಾಗಿ ಮನಸ್ಸು ರಂಗೇರಿ ರಂಗಿನಾಟ ಆಡುತ್ತಾ ಸ್ಥಿಮಿತ ಕಳೆದುಕೊಂಡು ಸಮಾಜ ಒಪ್ಪದ ನಡವಳಿಕೆ ತೋರುತ್ತಿರುತ್ತಾರೆ. ಆದರೆ, ಈ ವಿಚಾರದಲ್ಲಿ ಪ್ಪು ಪ್ಪಟ ಪರಂಜಿ.!

ತಾನು ಎಷ್ಟೇ ಎತ್ತರದಲ್ಲಿ ಇದ್ದರು ಜನರ ಮದ್ಯೆ ನಡೆದುಕೊಳ್ಳುವ ರೀತಿ, ಹಾವ-ಭಾವ, ಹಸನ್ಮುಖ, ಮುಗ್ಧತೆಯ ಮಾತುಗಳು, ಜೊತೆಗೆ ಮಾದರಿಯ ಒಂದಿಷ್ಟು ಸಮಾಜಮುಖಿ ಕಾರ್ಯಗಳು - ಇವೆಲ್ಲವುಗಳನ್ನ ಸೇರಿಸಿ ಪೊಟ್ಟಣ ಮಾಡಿ ಕಟ್ಟಿದ ವ್ಯಕ್ತಿತ್ವವೇ "ಕರ್ನಾಟಕ ರತ್ನ ಪುನೀತ್ ರಾಜಕುಮಾರ್".


- ರಾಘವೇಂದ್ರ. ಜಿ. ಶ್ರೀರಾಮಯ್ಯ
 9060660060           

Comments

  1. ಹೌದು ಸತ್ಯವಾದ ಮಾತು, ಕರ್ನಾಟಕದ ದೊಡ್ಡ ಕುಟುಂಬದವರಾಗಿ, ಚಂದನವವನದ ಟಾಪ್ ನಟನಾಗಿ ಹೆಸರು ಮಾಡಿದ್ದರೂ ಸಹ ಅವರು ಎಂದಿಗೂ ಅಗೌರವದಿಂದ ನಡೆದುಕೊಂಡಿಲ್ಲ. ಮಕ್ಕಳಿಂದ ಹಿಡಿದು ವಯಸ್ಕರವರೆಗೊ ಎಲ್ಲರಿಗೂ ನಮ್ಮ ಅಪ್ಪು ಅಚ್ಚು-ಮೆಚ್ಚು.

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

ಹೇಗಿದ್ದಾರೆ ಮೇಷ್ಟ್ರು..?

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಸಾರ್ಥಕ ನಿವಾಸ

ಅಪ್ಪಾ... Ex-MP ಎಂದರೇನು?

ದೃಢ ನಿರ್ಧಾರ, ದೃಢ ಮನಸ್ಸು

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ