ಕನ್ನಡ ಪರ ಸಂಘಟನೆಗಳು ಇಲ್ಲವಾದರೆ...?

ಕನ್ನಡ ಪರ ಸಂಘಟನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಒಂದು ರೀತಿಯ ತಾತ್ಸಾರ-ತಿರಸ್ಕಾರ ಮನೋಭಾವ ಕೆಲವರಲ್ಲಿ ಖಂಡಿತ ಇರುತ್ತೆ; ಈ ಸಂಘಟನೆಗಳಿಗೆ ಮಾಡೋಕೆ ಕೆಲಸ ಇಲ್ಲ, ಇವರೆಲ್ಲ ಕಮಾಯಿ ಗಿರಾಕಿಗಳು, ಪ್ರಚಾರಕ್ಕಾಗಿ ಗಿಮಿಕ್ ಮಾಡುತ್ತಾ ಜನರಿಗೆ ತೊಂದರೆ ಕೊಡ್ತಾರೆ... ಹೀಗೆಲ್ಲ ಒಂದಿಷ್ಟು ಮಂದಿ ಮನಸ್ಸಿನಲ್ಲೇ ಬೈದುಕೊಳ್ತಾ ಇರುತ್ತಾರೆ ಕೂಡ.

ನಾಡಿನ ಭಾಷೆ, ನೆಲ, ಜಲ, ಗೌರವ, ಘನತೆ ಮತ್ತು ಅಸ್ಮಿತೆಯ ವಿಚಾರಗಳು ಬಂದಾಗ ತಕ್ಷಣ ಹೋರಾಟಕ್ಕೆ ಇಳಿದು ಸರ್ಕಾರದ ಗಮನ ಸೆಳೆಯುವುದೇ ನಮ್ಮ ರಾಜ್ಯದಲ್ಲಿರುವ ಹಲವಾರು ಕನ್ನಡ ಪರ ಸಂಘಟನೆಗಳು.

ಒಮ್ಮೆ ಯೋಚಿಸಿ ನೋಡಿ - ಈ ನಮ್ಮ ಕನ್ನಡ ಪರ ಸಂಘಟನೆಗಳು ಇಲ್ಲವಾದರೆ... ಜನಸಾಮಾನ್ಯರು ಅಥವಾ ರಾಜಕಾರಣಿಗಳು ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಲು ಸಾಧ್ಯವೇ?

ಖಂಡಿತಾ ಸಾಧ್ಯವಿಲ್ಲ..! ನಮ್ಮ ಜನಸಾಮಾನ್ಯ ಎಂಬ ಈ ವರ್ಗ ನಾಡಿಗೆ ಆಗುವ ಅನ್ಯಾಯ, ದೌರ್ಜನ್ಯವನ್ನು TV ಯಲ್ಲಿ ನೋಡುತ್ತಾ ಕೋಪದಿಂದ ರಾಜಕಾರಣಿಗಳನ್ನು ಬೈದುಕೊಳ್ತಾ ಬರೀ TV ಮುಂದೆ ಶೂರರಾಗಿರುತ್ತೇವೆ ಅಷ್ಟೇ. ನಮಗೆ ಎಷ್ಟೇ ಅಭಿಮಾನ, ಪ್ರೀತಿ ಇದ್ದರೂ ಬೀದಿಗಿಳಿದು ಹೋರಾಟದಲ್ಲಿ ಪಾಲ್ಗೊಳ್ಳುವ ಧೈರ್ಯ, ಮನಸ್ಸು ನಾವುಗಳು ಮಾಡುವುದಿಲ್ಲ.

ದುರಂತ ಏನೆಂದರೆ ಇದೇ ವರ್ಗ ತಾನು ನೆಚ್ಚಿದ ರಾಜಕೀಯ ಪಕ್ಷವನ್ನು ಬಲವಾಗಿ ಬೆಂಬಲಿಸುತ್ತಾರೆ ಮತ್ತು ನಾಯಕನ ಪರವಾಗಿ ಹೋರಾಟಕ್ಕೂ ಇಳಿದುಬಿಡುತ್ತಾರೆ.

ಇದೇ ಬೆಂಬಲ, ಹೋರಾಟ ನಾಡಿನ ಅಸ್ಮಿತೆಯ ವಿಚಾರದಲ್ಲಿ ನಾವುಗಳು ಏಕೆ ತೋರುವುದಿಲ್ಲ...?
ಕೆಲವೊಮ್ಮೆ ಜನರ ಒಂದಿಷ್ಟು ಹೋರಾಟಗಳು ಕೇವಲ ಆಯಾ ಪ್ರಾಂತ್ಯಗಳಿಗೆ ಸೀಮಿತವಾಗಿರುತ್ತವೆ. ಆದರೆ, ಈ ನಮ್ಮ ಕನ್ನಡ ಪರ ಸಂಘಟನೆಗಳ ಹೋರಾಟಗಳು ಸಮಗ್ರ ಕರ್ನಾಟಕ ರಾಜ್ಯದ ಪರವಾಗಿ ಇರುತ್ತವೆ. 

ಹೀಗಿರುವಾಗ ನಾಡಿನ ಭಾಷೆ, ನೆಲ, ಜಲ, ಗೌರವ, ಘನತೆ ಮತ್ತು ಅಸ್ಮಿತೆಯ ಉಳಿವಿನ ವಿಚಾರವಾಗಿ ಅವಶ್ಯಕತೆ ಮತ್ತು ಅನಿವಾರ್ಯತೆ ಅನುಗುಣವಾಗಿ ಜನಸಾಮಾನ್ಯರು ಕನಿಷ್ಠ ನೈತಿಕ ಬೆಂಬಲವಾದರೂ ಈ ಸಂಘಟನೆಗಳಿಗೆ ತೋರಬೇಕು ಎಂಬುದು ನನ್ನ ಅಭಿಪ್ರಾಯ.


- ರಾಘವೇಂದ್ರ. ಜಿ. ಶ್ರೀರಾಮಯ್ಯ
 9060660060           


Comments

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಹೇಗಿದ್ದಾರೆ ಮೇಷ್ಟ್ರು..?

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಸಾರ್ಥಕ ನಿವಾಸ

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ

ಅಪ್ಪಾ... Ex-MP ಎಂದರೇನು?

ದೃಢ ನಿರ್ಧಾರ, ದೃಢ ಮನಸ್ಸು