ನಿಷ್ಪ್ರಯೋಜಕ ಜಾತಿವಾರು ಸಂಘಗಳು

ಒಕ್ಕಲಿಗ, ಲಿಂಗಾಯತ, ವೀರಶೈವ, ಬ್ರಾಹ್ಮಣ, ಕುರುಬ, ಗೊಲ್ಲ/ಯಾದವ ಹೀಗೆ ಇನ್ನು ಹಲವಾರು ಜಾತಿಗಳ ಹೆಸರಲ್ಲಿ ಸಂಘಗಳು ರಚನೆಯಾಗಿವೆ. ಈ ಸಂಘಗಳಲ್ಲಿ ನಡೆಯುವ ಚುನಾವಣೆಗಳು ಸರ್ಕಾರ ರಚನೆ ಮಾಡುವ ಚುನಾವಣೆಗಳಿಗಿಂತ ಜೋರಾಗಿಯೇ ನಡೆಯುತ್ತವೆ.

ಒಂದೇ ಜಾತಿ ಎರಡು-ಮೂರು ಅಭ್ಯರ್ಥಿ ಪಂಗಡಗಳು. ಅಧ್ಯಕ್ಷ, ನಿರ್ದೇಶಕ ಸ್ಥಾನಗಳ ಗೆಲುವಿನ ದುಂಬಾಲು ಬಿದ್ದು ಕೋಟಿ-ಕೋಟಿ ಹಣ ಚೆಲ್ಲುತ್ತಿರುವುದರ ಒಳಮರ್ಮ ನೋಡಿದರೆ ಅನ್ನಿಸುತ್ತೆ; ಸಂಘದ ಹೆಸರಲ್ಲಿ ವೈಯುಕ್ತಿಕ ಲಾಭ, ಲಾಭಿ ಮತ್ತು ಲೂಟಿಯ ಲೆಕ್ಕಾಚಾರಗಳು ಬಿಟ್ರೆ ಸಮಾಜದ ಹಿತ ಕಾಪಾಡುವ ಚಿಂತನಮಾರ್ಗ ಗುಲಗಂಜಿಯಷ್ಟೂ ಇವರುಗಳಿಗೆ ಇರೋದಿಲ್ಲ.

ಈ ಜಾತಿಗಳ ಸಂಘದಿಂದ ತನ್ನ ಸಮಾಜದ ಬಡವರ ಏಳಿಗೆಯಾಗುತ್ತಿದೆಯ ಎಂದು ಒಳವೊಕ್ಕು ನೋಡಿದರೆ ಕಾಣಸಿಗುವುದು ಶೂನ್ಯ ಅಥವಾ ಬೆರಳೆಣಿಕೆಯಷ್ಟು ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಲಾಭಕ್ಕಾಗಿ ಸರ್ಕಾರವೇ ಅಧಿಕೃತವಾಗಿ ಜಾತಿಗಳ ಅಭಿವೃದ್ಧಿ ನೆಪದಲ್ಲಿ ನಿಗಮಗಳ ಸ್ಥಾಪನೆ ಮಾಡುತ್ತಿರುವುದು ಶೋಚನೀಯ.

ದೇಶದ ಜನರ ಐಕ್ಯೆತೆ ಮತ್ತು ಸಮಾನತೆಗಾಗಿ ಜಾತಿ-ಪದ್ದತಿ, ಮೀಸಲಾತಿ ವ್ಯವಸ್ಥೆಗಳು ನಿರ್ಮೂಲನೆ ಆಗಬೇಕು. 

ಇದರ ದಿಶೆಯಲ್ಲಿ ಮೊದಲನೆಯ ಹೆಜ್ಜೆಯಾಗಿ ನ್ಯಾಯಾಲಯವು ಕೆಲಸಕ್ಕೆ ಬಾರದ ಈ ಜಾತಿವಾರು-ಸಂಘಗಳನ್ನು ರದ್ದುಗೊಳಿಸಿದರೆ ಒಳಿತು, ಎಂಬುದು ನನ್ನ ಅಭಿಪ್ರಾಯ.


- ರಾಘವೇಂದ್ರ. ಜಿ. ಶ್ರೀರಾಮಯ್ಯ
 9060660060           

Comments

  1. How to tell this people's we are all one .They have no cohesion. So much of money spent for this election, this is prestige purpose are profit purpose I can't known.

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

ಹೇಗಿದ್ದಾರೆ ಮೇಷ್ಟ್ರು..?

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಸಾರ್ಥಕ ನಿವಾಸ

ಅಪ್ಪಾ... Ex-MP ಎಂದರೇನು?

ದೃಢ ನಿರ್ಧಾರ, ದೃಢ ಮನಸ್ಸು

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ