ರೈತರ ಹೆಸರಲ್ಲಿ 2ನೇ ಮಹಾಪರಾಧ


ರೈತರ ಬೇಡಿಕೆಗಳು, ಹೋರಾಟಗಳು, ಚಳುವಳಿಗಳು, ಸಂಗ್ರಾಮಗಳು, ಪ್ರತಿಭಟನೆಗಳು... ಎಲ್ಲವೂ ಪ್ರಜಾಪ್ರಭುತ್ವದ ಅಡಿಯಲ್ಲಿ ಇತಿ-ಮಿತಿಯಿಂದ ನಡೆದರೆ ಸರಿಯೇ. ಆದರೆ ರೈತರ ಪ್ರತಿಭಟನೆ ನೆಪದಲ್ಲಿ ದುರುದ್ದೇಶದಿಂದ ದೇಶಕ್ಕೆ ಅಪಚಾರ ಮಾಡಿದರೆ ಹೇಗೆ?

ರೈತರ ಹೋರಾಟದ ಹೆಸರಲ್ಲಿ ನಮ್ಮ ದೇಶದ ಹೆಮ್ಮೆಯ ಮುಕುಟ ಕೆಂಪುಕೋಟೆಯ ಮೇಲೆ ಅತಿಕ್ರಮಣ ಪ್ರವೇಶ ಮಾಡಿ ಇತಿಹಾಸದಲ್ಲಿ ಅಳಿಯದ ಕಪ್ಪುಚಾಹೆ ಮೂಡಿಸಿ, ಆ ಘಟನೆ ಮಾಸುವಷ್ಟರಲ್ಲಿ ಮತ್ತೊಂದು ಅಪರಾಧ ಮಾಡಿಬಿಟ್ಟಿದ್ದಾರೆ.

ಪ್ರಜಾಪ್ರಭುತ್ವ ಅಡಿಯಲ್ಲಿ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಮಾನ್ಯ ಪ್ರಧಾನಮಂತ್ರಿ ಯವರನ್ನ ರಸ್ತೆಯಲ್ಲಿ ನಿಲ್ಲಿಸಿ ಅಪಮಾನ ಮಾಡುವಂತಹ ಕಿಡಿಗೇಡಿ ಬುದ್ದಿ ಬಂದಿದೆಯ ನಮಗೇ... ಛೇ... ಅಸಹ್ಯ ಬುದ್ದಿ ಅನ್ನಿಸೋದಿಲ್ವಾ...?

ಅರ್ಥವಿಲ್ಲದ ನಿಮ್ಮ ಪ್ರತಿರೋಧ ವ್ಯಕ್ತಪಡಿಸುವ ದುರಾಲೋಚನೆ ಇದ್ದಲ್ಲಿ ಅವರು ಹಾದು ಹೋಗುವ ರಸ್ತೆ ತಡೆ ಮಾಡುವ ಬದಲು ದೂರದಲ್ಲಿ ನಿಂತು ಸಾಂಕೇತಿಕ ಪ್ರತಿರೋಧ ವ್ಯಕ್ತಪಡಿಸುತ್ತ ಗಮನ ಸೆಳೆಯಬಹುದಿತ್ತು ಅಲ್ಲವೇ?

ಹೌದು, ಖಂಡಿತವಾಗಿಯೂ ಇದು ಪ್ರಧಾನಮಂತ್ರಿ ರಕ್ಷಣಾ ಧಳದ ವೈಫಲ್ಯ. ಇದರಲ್ಲಿ ಎರಡನೇ ಮಾತಿಲ್ಲ. 

ಆದರೆ, ಇಡೀ ಪ್ರಪಂಚ ನಡೆಯುತ್ತಿರುವುದು ನಂಬಿಕೆ ವಿಶ್ವಾಸದ ಮೇಲೆ. ಇದೇ ನಂಬಿಕೆ-ವಿಶ್ವಾಸದಿಂದ ರಸ್ತೆಯ ಮೂಲಕ ಸಂಚರಿಸುವ ಧೈರ್ಯ ಮಾಡಿದ್ದರೋ ಏನೋ ಗೊತ್ತಿಲ್ಲ. ಆದರೆ, ನಮ್ಮ ಜನ ಕೆಳ ಮಟ್ಟಕ್ಕೆ ಹೋಗಿ ನೀಚ ವರ್ತನೆ ತೋರಿ ನಂಬಿಕೆ-ವಿಶ್ವಾಸಕ್ಕೆ ದ್ರೋಹವೆಸಗಿದ್ದಾರೆ.

ಪ್ರಧಾನಮಂತ್ರಿ ಪಟ್ಟ ಅಲಂಕರಿಸಿರುವ ವ್ಯಕ್ತಿ ಯಾರು ಎಂಬುದನ್ನ ಪಕ್ಕಕ್ಕೆ ಇಟ್ಟು, ಕನಿಷ್ಠ ಆ ಸ್ಥಾನಕ್ಕಾದರು ಗೌರವ ಕೊಡಬೇಕು ಅನ್ನಿಸಲಿಲ್ವಾ ನಿಮಗೆ...?

ರೈತ ವರ್ಗ ಎಂಬುದು ದೇಶದ ದೊಡ್ಡ ಶಕ್ತಿ. ಕೆಲ ಕಿಡಿಗೇಡಿಗಳು ಈ ವರ್ಗದಲ್ಲಿ ಬೆರೆತು ಈ ರೀತಿಯ ದುಷ್ಕೃತ್ಯ ನಡೆಸುತ್ತಿರುವವರ ಎಡೆಮುರಿ ಕಟ್ಟಲೇಬೇಕಿದೆ.


- ರಾಘವೇಂದ್ರ. ಜಿ. ಶ್ರೀರಾಮಯ್ಯ
 9060660060           


Comments

  1. It was a good publilicity stunt by PM Modi, we have to understand this, how the lapse happened by his own security forces. Think around

    ReplyDelete
  2. It was a good publilicity stunt by PM Modi, we have to understand this, how the lapse happened by his own security forces. Think around

    ReplyDelete
  3. You have to earn the respect of people you work with, he has done opposite by killing 100s , what were you expecting, there is no surprise ..

    Respect is one of life's greatest treasures. I mean, what does it all add upto if you don't have that ?
    - Marilyn Monroe

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಹೇಗಿದ್ದಾರೆ ಮೇಷ್ಟ್ರು..?

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

ಸಾರ್ಥಕ ನಿವಾಸ

ಮನೋಜ್ಞ ಮಾದರಿ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ

ದೃಢ ನಿರ್ಧಾರ, ದೃಢ ಮನಸ್ಸು

ಅಮುಲ್ ಗೆ ವಿರೋಧವೇಕೆ, ನಂದಿನಿ ಗೆ ಬೆಂಬಲ ಬೇಕೆ?