ನಾ ಕೊಳ್ಳುವ ಮಾಂಸದಂಗಡಿ

"ಮಾಂಸವನ್ನು ನೀನು ಎಲ್ಲಿ ಕೊಳ್ಳುತ್ತೀಯ...?" ಎಂದು ನನ್ನೊಬ್ಬ ಗೆಳೆಯ ನನಗೆ ಕೆಲವು ದಿನಗಳ ಹಿಂದೆ ಪ್ರಶ್ನೆ ಮಾಡಿದ್ದ. ಪ್ರಸ್ತುತ ವಿದ್ಯಮಾನಗಳನ್ನ ಅರಿತವರಿಗೆ ಈ ಪ್ರಶ್ನೆಯನ್ನ ಕೇಳಿದ ಕೂಡಲೇ ಅದರ ಭಾವಾರ್ಥ ತಿಳಿಯುತ್ತದೆ. ಈ ರೀತಿ ಪ್ರಶ್ನೆ ಕೇಳುವವರ ಮನಸ್ಥಿತಿ ಸಹ ಅರ್ಥೈಸಬಹುದು ಕೂಡ.

ಅವನಿಗೆ ನನ್ನ ದಿಟ್ಟ ಉತ್ತರ ಹೀಗಿತ್ತು... ಸುಮಾರು ವರ್ಷಗಳಿಂದ ನನಗೆ ಸಮೀಪವಿರುವ ಒಬ್ಬ ಆತ್ಮೀಯ ಮುಸಲ್ಮಾನ ಬಂದು ಅಂಗಡಿಯಲ್ಲೆ ಕೊಳ್ಳುವುದು. ಹಲಾಲ್-ಗಿಲಾಲ್  ಎನ್ನುವುದನ್ನ ಇದುವರೆಗೂ ನೋಡಿಲ್ಲ, ನೋಡುವುದಿಲ್ಲ ಸಹ. ಹಲಾಲ್ ಬಗ್ಗೆ ಸುಮಾರು ವರ್ಷಗಳ ಮುಂಚೆಯೇ ಅರಿವಿದ್ದರು ನನಗೆ ಅದು ಅಸಂಬಂದ ಎಂದು ಹೇಳಿ, ಅವನ ಮರು ಪ್ರಶ್ನೆಗೆ ಆಸ್ಪದ ನೀಡದೆ ಮಾತು ಬದಲಿಸಬೇಕಾಯಿತು.

ನಿನ್ನೆಯ ದಿನ ಯುಗಾದಿ ಹಬ್ಬದ ಸಲುವಾಗಿ ಮನೆಗೆ ಹಬ್ಬದ ಸಾಮಾನುಗಳ ಖರೀದಿಗೆ ಹೋಗಿದ್ದೆ. ನಾ ಕೊಳ್ಳುವ ಮಾಂಸದಂಗಡಿಯ ಮುಂದೆ ಸಾಗುವಾಗ ಆ ಅಂಗಡಿಯ ನಾಮಫಲಕ ಬದಲಾವಣೆ ಮಾಡಿ ಸ್ವಲ್ಪ ದೊಡ್ಡದಾಗಿ ಹಾಕಿರುವುದು ಕಣ್ಣಿಗೆ ಬಿತ್ತು. ಆ ಹೊಸ ನಾಮಫಲಕದಲ್ಲಿ ಹಲಾಲ್ ಎಂಬುದು ಎಲ್ಲೂ ಕಾಣಲಿಲ್ಲ. ಇದಕ್ಕೆ ಮುಂಚಿನ ನಾಮಫಲಕ ಸ್ವಲ್ಪ ಹಳೆಯದಿತ್ತು, ಅದರಲ್ಲಿ ಏನು ಬರೆದಿತ್ತು ಎಂಬುದು ಸತ್ಯವಾಗಿಯೂ ಗಮನಿಸಿರಲಿಲ್ಲ. 

ಮುಂಚಿನ ನಾಮಫಲಕದಲ್ಲಿ ಅವರ ಧರ್ಮದ ಪ್ರಕಾರ ಹಲಾಲ್ ಎಂದು ಉಲ್ಲೇಖವಿತ್ತೋ ಏನೋ, ಅದಕ್ಕಾಗಿಯೇ ಈ ಬದಲಾವಣೆ ಇರಬಹುದು ಅಂದುಕೊಂಡು ಮುಂದೆ ಸಾಗಿದೆ. ನಾಮಫಲಕ ಬದಲಾವಣೆ ನೋಡಿ ಬೇಸರವಾಯಿತು. ನಾವುಗಳು ಸಣ್ಣವರಾಗುತ್ತಿದ್ದೀವಾ... ಎಂದನಿಸಿತು.

ಜೀವನದಲ್ಲಿ ಕಷ್ಟಗಳನ್ನ ನೋಡಿರುವ ಯಾವುದೇ ಧರ್ಮದ ವ್ಯಾಪಾರಸ್ಥರಿಗೆ ತನ್ನ ಧರ್ಮದ ಅನವಶ್ಯಕ ಗೊಂದಲಗಳಿಗಿಂತ ನೆಮ್ಮದಿಯ ವ್ಯಾಪಾರ ವಹಿವಾಟು ಮುಖ್ಯವಾಗಿರುತ್ತೆ.

ಯಾವುದೇ ಧರ್ಮ ರಕ್ಷಣೆ ಮಾಡುವುದಕ್ಕೆ ಬೀದಿಗಿಳಿದು ಹೋರಾಟ ಮಾಡಿ ಸಮಾಜದಲ್ಲಿ ಭಯ, ಗೊಂದಲ ಮತ್ತು ಅಶಾಂತಿಯ ವಾತಾವರಣ ಸೃಷ್ಟಿಸುವ ಬದಲಾಗಿ ನಮ್ಮ ಸನಾತನ ಪರಂಪರೆಯಿಂದ ರೂಡಿಗತವಾಗಿ ಬಂದಿರುವ ಆಚಾರ, ವಿಚಾರ, ಸಂಸ್ಕೃತಿಯನ್ನು ವ್ಯಕ್ತಿಗತ ಅಳವಡಿಸಿಕೊಂಡು ಪಾಲನೆ ಮಾಡುತ್ತಾ, ನಮ್ಮ ಮುಂದಿನ ಪೀಳಿಗೆಗೂ ಅನುಕರಣೆಯ ನೀತಿ ಭೋಧಿಸಿದರೆ ಧರ್ಮ ಉಳಿಯುತ್ತದೆ ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ.

ಧರ್ಮ ರಕ್ಷಣೆಗೆ ಹೋರಾಟ ಬೇಡ, ಅನುಕರಣೆ ಮತ್ತು ಪಾಲನೆ ಸಾಕು.

- ರಾಘವೇಂದ್ರ. ಜಿ. ಶ್ರೀರಾಮಯ್ಯ
 9060660060         

Comments

  1. Nijwaglu cheenagi bardidiya, adhe rithi few days back vichara kuda bardidre olledu ithu, bandh madidaga Hindu fish maro atra purchase madbardu anta helidu kuda bimbsu en mele :)

    ReplyDelete
  2. Sir.
    I disagree with your opinion,
    Many a times your silence is considered as your weakness, all the big hotel's/airlines buy halal meat, don't you think this is injustice for Hindu butchers,
    If any person wants to eat Jhatka meat he will not get in any of the big hotel's, don't you think this is unjust.

    ReplyDelete
  3. From: Manjunath (via What's App)
    ಹೌದು ಸತ್ಯವಾದ ಮಾತು, ಕುವೆಂಪು ಅವರು ಹೇಳಿರುವಂತೆ ಏನಾದರೂ ಆಗು ಮೊದಲು ಮಾನವನಾಗು.ಸರ್ವ ಜನಾಂಗದ ಶಾಂತಿಯ ತೋಟ💐💐
    ಶುಭಾಶಯಗಳು ರಾಘವೇಂದ್ರ

    ReplyDelete
  4. Istu deena illade erudu ega yenakke. Namma uralli anna tammandira tara idare

    ReplyDelete
  5. ನಾನು ನಿಮ್ಮ ಹೇಳಿಕೆಗೆ ವಿರುದ್ದ ಗೆಳೆಯಾ ಕ್ಷಮಿಸಿ,, ಅನಾದಿ ಕಾಲದಿಂದಲೂ ನಾವು ಮಾಡುತ್ತಿರುವ ತಪ್ಪೇ ಇದು. ನಾವು ಎಲ್ಲಾ ಧರ್ಮವನ್ನು ಸಮಾನವಾಗಿ ನೋಡುತ್ತೇವೆ ನಿಜ ಆದರೆ ನಮ್ಮ ಧರ್ಮವನ್ನು ಅವರು ಕೂಡ ಹಾಗೇ ನೋಡಬೇಕು,, ಇದುವೇ ಸತ್ಯ
    ಮೊದಲಿದ್ದ ಜನರ ಬಾವನೆಗಳು ಈಗಿಲ್ಲ
    ಹ ಲಾ ಲ್ ಮಾಡಿದ ಮಾಂಸ ನಮ್ಮ ಹಿಂದೂ ಜನ ತಿನ್ನುವುದಾದರೆ . ಹಲಾಲ್ ಮಾಡದ ಮಾಂಸ ಮುಸ್ಲಿಮರು ಯಾಕೆ ತಿನ್ನ ಬಾರದು. ತಿಂದರೆ ಏನಾಗುತ್ತದೆ.. ನನ್ನ ಪ್ರಕಾರ ಏನು ಆಗುವುದಿಲ್ಲ
    ಅವರು ಅವರ ಧರ್ಮದ ಕಟ್ಟಾ ಅನುಯಾಯಿ ಜನರು... ಆದರೆ ನಮ್ಮ ಹಿಂದೂ ಧರ್ಮ ನೀತಿ ನಿಯಮ ಕಟ್ಟಲೆ ಗಳ ಅನುಸರಿಸದ ಜನರೇ.....?

    ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಬಾಂದವರ ದೇಶ ಭಕ್ತಿ ಎಲ್ಲಿಯೂ ಕಾಣುತ್ತಿಲ್ಲ. ದೇಶ ದ್ರೋಹದ ಕೆಲಸಗಳೇ ನಮ್ಮೆದುರಿಗೆ ಕಾಣುತ್ತಿವೆ...

    ನಮ್ಮದು ಹಿಂದೂ ದೇಶ ಇಲ್ಲಿನ ಹಿಂದೂ ಕಾನೂನು ಪಾಲಿಸಬೇಕು,,,, ಅದೇ ಧರ್ಮ

    ಬೇರೆ ಮುಸ್ಲಿ o ದೇಶಗಳಲ್ಲಿ ಮುಸ್ಲಿಂ ಕಾನೂನು ನಾವು ಪಾಲಿಸುವುದಿಲ್ಲವೆ ಹಾಗೆ




    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಹೇಗಿದ್ದಾರೆ ಮೇಷ್ಟ್ರು..?

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

ಸಾರ್ಥಕ ನಿವಾಸ

ಮನೋಜ್ಞ ಮಾದರಿ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ

ದೃಢ ನಿರ್ಧಾರ, ದೃಢ ಮನಸ್ಸು

ಅಮುಲ್ ಗೆ ವಿರೋಧವೇಕೆ, ನಂದಿನಿ ಗೆ ಬೆಂಬಲ ಬೇಕೆ?