ಸ್ನೇಹಿತನ ಸಹಾಯ ಉಪಯೋಗಿಸಿಕೊಳ್ಳಿ, ಸ್ನೇಹಿತನನ್ನಲ್ಲ!
ನನ್ನೊಬ್ಬ ಆತ್ಮೀಯ ಸ್ನೇಹಿತ ವಿನಯ್ ಬರೆದ ಸಾಲುಗಳು.!
ನಮಗೆ ಒಂದಲ್ಲ ಒಂದು ರೀತಿ ಯಾವಾಗಲಾದರೂ ಸ್ನೇಹಿತರ ಸಹಾಯ ಬೇಕಾಗಬಹುದು, ಆದರೆ ಸಮಯ ಬಂದಾಗ ಎಲ್ಲಾ ಸ್ನೇಹಿತರು ಸಹಾಯ ಮಾಡುವ ಪರಿಸ್ಥಿತಿಯಲ್ಲಿ ಇರುವುದಿಲ್ಲ!
ಹಾಗೆಯೇ, ಎಲ್ಲಾ ಸಮಯದಲ್ಲೂ ಹಣದ ಸಹಾಯವೇ ಬೇಕಾಗಿರುವುದಿಲ್ಲ!
ಉದಾಹರಣೆಗೆ; ನಾನು ನನ್ನ ಕನಸಿನ ಮನೆ ಕಟ್ಟಬೇಕಾದರೆ ನನಗೆ ನನ್ನ ಸ್ನೇಹಿತ ರಾಘವೇಂದ್ರ ಮಾಡಿರುವ ಸಹಾಯ ತುಂಬಾ ಉಪಯೋಗಕಾರಿಯಾದದ್ದು. ಅವನ ಅನುಭವದಿಂದ ನೀಡಿರುವ ಸಲಹೆ, ತಪ್ಪು-ಸರಿಗಳ ವಿವರಣೆ ನನಗೆ ತುಂಬಾ ಸಹಾಯ ಮಾಡಿದೆ. ಮುಖ್ಯವಾಗಿ ನನಗೆ ನೀಡಿರುವ ಸಂಪರ್ಕ ಹಾಗೂ ಅವನ ಸಮಯ ಅಮೂಲ್ಯವಾದದ್ದು.
ಹೀಗೆ, ನಿಷ್ಕಲ್ಮಶವಾಗಿ ಸಹಾಯ ಮಾಡುವ ಸ್ನೇಹಿತರಿಗೆ, ಹಾಗೂ ಅವರು ನೀಡಿರುವ ಅತ್ಯಮೂಲ್ಯ ಸಮಯಕ್ಕೆ ನಾವು ಬೆಲೆ ಕೊಡುವುದು ನಮ್ಮ ಕರ್ತವ್ಯ. ಆದರೆ ಕೆಲವರು ಸ್ನೇಹದ ಸಹಾಯವನ್ನು ವ್ಯವಹಾರದ ದೃಷ್ಟಿಯಿಂದ ಮಾತ್ರ ನೋಡಿ ಅವರ ಸಹಾಯವನ್ನು ದುರುಪಯೋಗ ಪಡಿಸಿಕೊಂಡು ನಂಬಿಕೆ ಕಳೆದುಕೊಳ್ಳುತ್ತಾರೆ!
ಸ್ನೇಹಿತನ ಸಮಯಕ್ಕೆ ಬೆಲೆ ಕೊಡಿ, ಅವನ ನಂಬಿಕೆ ಉಳಿಸಿಕೊಳ್ಳಿ, ವ್ಯವಹಾರಕ್ಕೆ ಸಾವಿರ ದಾರಿ... ಸ್ನೇಹಕ್ಕೆ ಒಂದೇ ದಾರಿ... ಅದು ಶಾಶ್ವತವಾಗಿ ಮುಚ್ಚದಂತೆ ಎಚ್ಚರವಹಿಸಿ..!
ಧನ್ಯವಾದಗಳು ಇದು ಸತ್ಯ ಸಂಗತಿ!
ReplyDeleteಧನ್ಯವಾದಗಳು ಇದು ಸತ್ಯ ಸಂಗತಿ!
ReplyDelete