ಮನೋಜ್ಞ ಮಾದರಿ

ಸಾಧನೆಯೆಂಪಥದಲ್ಲಿ ನಡೆಯ ಬಯಸೆಂಬುವರ ತಡೆವವರಾರು.!
ಒಬ್ಬ ಮಹಿಳೆಗೆ ಸಾಮಾನ್ಯವಾಗಿ ತನ್ನ ಸಾಂಸಾರಿಕ ಜಂಜಾಟಗಳ ನಡುವೆ ಯಾವುದಾದರು ಒಂದು ವೃತ್ತಿ ಕ್ಷೇತ್ರದಲ್ಲಿ ಕೆಲಸ ಮಾಡುವುದೇ ಕಷ್ಟವೆನ್ನಿಸಬಹುದು. ಇವುಗಳ ಜೊತೆಗೆ ಬಾಲ್ಯದಿಂದ ತಾ ಬಯಸಿದ ಮಗದೊಂದು ಕ್ಷೇತ್ರದಲ್ಲಿಯೂ ಸಹ ಉತ್ತುಂಗ ಸಾಧನೆಯತ್ತ ದಾಪುಗಾಲು ಹಾಕುವುದೆಂದರೆ ಅಸಾಮಾನ್ಯವೇ.
ಮನೋಜ್ಞ
ಹೌದು, ಮನೋಜ್ಞ ನೃತ್ಯ ಕಲಾ ಅಕಾಡೆಮಿ ಎಂಬ ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ವಿದುಷಿ ಮಾನಸ ಮನುಮೋಹನ್ ರವರು ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆಯತ್ತ ಮುಖ ಮಾಡಿದ್ದಾರೆ ಎಂದನಿಸುತ್ತೆ. 
ಮನೋಜ್ಞ
ದೈನಂದಿನ ಜೀವನದ ಕೆಲಸ ಕಾರ್ಯಗಳಿಗೆ ಯಾರೊಬ್ಬರ ಸಹಾಯವೂ ಬಳಸದೆ ಮನೆ-ಮಕ್ಕಳ ಕೆಲಸಗಳನ್ನು ಸ್ವತಃ ಪತಿ-ಪತ್ನಿಯೇ ನಿಭಾಯಿಸಿ, ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿ ವೃತ್ತಿ ಮುಗಿಸಿ, ನಂತರ ಸಂಜೆ ವೇಳೆಗೆ ತನ್ನ ಬಹು ನೆಚ್ಚಿನ ಭರತನಾಟ್ಯದ ಎರಡು ಶಾಲೆಗಳಲ್ಲಿ ನೂರಾರು ಹೆಣ್ಣು ಮಕ್ಕಳಿಗೆ ಭರತನಾಟ್ಯ ಕಲೆಯ ತರಬೇತಿ ನೀಡುತ್ತಿದ್ದಾರೆ. ಇವೆಲ್ಲವುಗಳ ನಡುವೆ ಪಿ.ಎಚ್.ಡಿ ಪದವಿಗೆ ತಯಾರಿ ಮಾಡಿಕೊಳ್ಳುವುದು. ಇಷ್ಟೆಲ್ಲವನ್ನೂ ಇವರು ನಿಭಾಯಿಸುವ ರೀತಿ ಕೇಳಿದರೆ ಯಾರಿಗೆ ಆಗಲಿ ಆಶ್ಚರ್ಯ ಅನ್ನಿಸುತ್ತದೆ. ಇವರ ಲವಲವಿಕೆಯ ಕಾರ್ಯವೈಖರಿಗಳನ್ನ ನೋಡಿದರೆ ಪಾದರಸವನ್ನೂ ಮೀರಿಸುವಂತಿದೆ ಹಾಗೂ ಇವರ ನಿರಾಯಾಸ ಬದುಕು ಬೇರೊಬ್ಬರಿಗೆ ಮಾದರಿಯೇ ಸರಿ.
ಮನೋಜ್ಞ
ಮನೋಜ್ಞ ಪದದ ಭಾವಾರ್ಥ ತುಂಬುವ ಚಿಕ್ಕ ಸಾಕ್ಷಿಯೆಂದರೆ ಆಗಸ್ಟ್ 29, 2022 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಮನೋಜ್ಞ ನೃತ್ಯ ಕಲಾ ಅಕಾಡೆಮಿಯ ವಾರ್ಷಿಕೋತ್ಸವ. ನೂರಾರು ಮಕ್ಕಳಿಗೆ ಅದ್ಭುತ ನೃತ್ಯ ಕಲೆಯ ಜೊತೆಗೆ ಇವರು ಕಲಿಸಿರುವ ಶಿಸ್ತಿನ ಸಮನ್ವಯತೆ. ಮಕ್ಕಳ ನೃತ್ಯದ ಹಾವ-ಭಾವ-ಭಂಗಿ ನೋಡುತ್ತಿದ್ದರೆ ಕಣ್ಮನ ತುಂಬುತ್ತಿತ್ತು. ಬಹು ಮುಖ್ಯವಾಗಿ ಶ್ರೀಕೃಷ್ಣ, ಪಾಂಡುರಂಗ, ಪುರಂದರದಾಸ, ನಾರಾಯಣ, ಶಿವ ದೇವರುಗಳ ಪೌರಾಣಿಕ ಕಥಾ-ನಾಟಕವನ್ನು ಭರತನಾಟ್ಯದ ಮೂಲಕ ಮಕ್ಕಳಿಗೆ ಹಾಗೂ ಪೋಷಕ ವೃಂದಕ್ಕೆ ಪರಿಚಯ ಮಾಡಿಸುತ್ತಿದ್ದಾರೆ.
ಮನೋಜ್ಞ
ಸುಮಾರು 10 ವರ್ಷಗಳಿಂದ ವಿದುಷಿ ಮಾನಸ ಮನುಮೋಹನ್ ರವರ ಸತತ ಶ್ರಮ, ಶ್ರದ್ಧೆಯಿಂದ ಎಲೆಮರೆ ಕಾಯಿಯಂತ್ತಿದ್ದ ಮನೋಜ್ಞ ನೃತ್ಯ ಶಾಲೆ ಈಗ ಎಲ್ಲೆಡೆ ಪ್ರಜ್ವಲಿಸಲು ಆರಂಭಿಸಿದೆ. ಹೂವಿನೊಂದಿಗೆ ನಾರು ಸ್ವರ್ಗ ಸೇರಿತು ಎಂಬಂತೆ ಇವರ ನುರಿತ ಕಲಾಜ್ಞಾನದ ಫಲವಾಗಿ ಹಲವಾರು ಮಕ್ಕಳ ಪ್ರತಿಭೆ ಕೂಡ ಬೆಳಗಳಿದೆ. ಇವರ ಕಲೆಗೆ ಗೌರವ ಎಂಬ ಬೆಲೆ ಕೊಟ್ಟು ಪ್ರೋತ್ಸಾಹಿಸಿ, ಬೆಂಬಲಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕೀರ್ತಿಪತಾಕೆ ಮೆರೆಯಲಿ ಎಂದು ಹಾರೈಸಬೇಕಿದೆ.

- ರಾಘವೇಂದ್ರ. ಜಿ. ಶ್ರೀರಾಮಯ್ಯ
 9060660060             

Comments

  1. Inspirational Story.. All the best madam.. 😊🙏💐

    ReplyDelete
  2. ಸಾಮಾನ್ಯರಲ್ಲಿ ಅಸಾಮಾನ್ಯರು

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಹೇಗಿದ್ದಾರೆ ಮೇಷ್ಟ್ರು..?

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

ಸಾರ್ಥಕ ನಿವಾಸ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ

ದೃಢ ನಿರ್ಧಾರ, ದೃಢ ಮನಸ್ಸು

ಅಮುಲ್ ಗೆ ವಿರೋಧವೇಕೆ, ನಂದಿನಿ ಗೆ ಬೆಂಬಲ ಬೇಕೆ?