ಡಿಕ್ಷನರಿಗಳನ್ನು ಕೊಡಿಸಬಹುದೇ..?

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 6 ರಿಂದ 10 ನೇ ತರಗತಿಯ ಪ್ರತೀ ವಿದ್ಯಾರ್ಥಿಗೊಂದು ಶಬ್ದಕೋಶ ಪುಸ್ತಕ (Dictionary) ಉಚಿತವಾಗಿ ನೀಡುವ ಅಭಿಯಾನ.

ಡಿಕ್ಷನರಿಯನ್ನು ಮಕ್ಕಳು ಪರಿಣಾಮಕಾರಿಯಾಗಿ ಬಳಸಬಹುದೇ ಇಲ್ಲವೆ ಎಂಬುದನ್ನು ಹಲವು ಶಿಕ್ಷಕರ ಬಳಿ ಚರ್ಚಿಸಿಲಾಗಿದೆ;👇
ಮಕ್ಕಳು ಮನೆಯಲ್ಲಿ ಸ್ವತಃ ಅಭ್ಯಾಸ ಮಾಡುವಾಗ ಜೊತೆಯಲ್ಲಿ ತಮ್ಮದೇ ಒಂದು ನಿಘಂಟು ಪುಸ್ತಕವಿದ್ದರೆ ಹೆಚ್ಚು ಉಪಲಬ್ಧ.
ಪದಗಳ ಅರ್ಥ ನೋಡಲು ಮೊಬೈಲ್ ಬಳಸುತ್ತಿದ್ದಾರ? ಎಂದು ವಿಚಾರಿಸಿದಾಗ ಸಿಕ್ಕ ಉತ್ತರ: ಇಲ್ಲ. ಹಳ್ಳಿಯ ಎಲ್ಲಾ ಮಕ್ಕಳ ಮನೆಯಲ್ಲಿ ಸ್ಮಾರ್ಟ್ ಫೋನ್ ಇರುವುದಿಲ್ಲ.
ಇದ್ದರೂ, ಓದುವಾಗ ಪದಗಳ ಅರ್ಥ ನೋಡುವ ಸಲುವಾಗಿ ಮೊಬೈಲ್ ಪಕ್ಕದಲ್ಲಿ ಇಟ್ಟುಕೊಳ್ಳುವ ಹವ್ಯಾಸ ತಪ್ಪುತ್ತದೆ.
ಶಬ್ದಕೋಶ ಪುಸ್ತಕ ಬಳಸುವ ಹವ್ಯಾಸ ಬಾಲ್ಯದಿಂದಲೇ ರೂಢಿಸಿಕೊಂಡರೆ ನಾವು ಕೊಡುವ ಈ ಪುಸ್ತಕವನ್ನು ಮಕ್ಕಳು ಕನಿಷ್ಠ 5-9 ವರ್ಷಗಳು ಬಳಸುವ ಸಾದ್ಯತೆ ಇದೆ.

D.K Bharadwaj's STANDARD Abridged Dictionary 
(English - English - Kannada)
ತಾವು ಸ್ವಇಚ್ಛೆಯಿಂದ ಈ ಮೇಲಿನ ಪುಸ್ತಕವನ್ನು ಒಂದಿಷ್ಟು ಮಕ್ಕಳಿಗೆ ಕೊಡಬಯಸಿದರೆ ನಮಗೆ ತಿಳಿಸಿ. ಪುಸ್ತಕಗಳ ಕೊಡುಗೆಗೆ ಹಣ ಸ್ವೀಕರಿಸುವುದಿಲ್ಲ. ತಾವು ನೇರವಾಗಿ ನಮಗತ್ತಿರದ ಬುಕ್-ಸ್ಟೋರ್ ಗೆ ಹಣ ವರ್ಗಾಯಿಸಿದರೆ ನಾವು ಅಲ್ಲಿಂದ ಪುಸ್ತಕಗಳನ್ನು ಸ್ವೀಕರಿಸಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡುತ್ತೇವೆ. ಈ ಕಾರ್ಯದಲ್ಲಿ ತಮಗಾಸಕ್ತಿ ಇದ್ದರೆ ನಮ್ಮೊಡನೆ ಕೈ ಜೋಡಿಸಿ ನಿಮ್ಮ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪುಸ್ತಕಗಳನ್ನು ತಲುಪಿಸಿ ಮತ್ತು ಹಿಂಜರಿಯದೆ ನಿಮ್ಮಾತ್ಮೀಯರಿಗೆ ಶೇರ್ ಮಾಡಿ, ಸಹಾಯ ಕೋರಿ.
ಇಂತಿ;                   
- ರಾಘವೇಂದ್ರ. ಜಿ. ಶ್ರೀರಾಮಯ್ಯ 
9060660060             
For more info, visit 👉 anisike-abhipraya.com    
  

Comments

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

ಹೇಗಿದ್ದಾರೆ ಮೇಷ್ಟ್ರು..?

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಸಾರ್ಥಕ ನಿವಾಸ

ಅಪ್ಪಾ... Ex-MP ಎಂದರೇನು?

ದೃಢ ನಿರ್ಧಾರ, ದೃಢ ಮನಸ್ಸು

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ