ಶಾಲೆಯಲ್ಲಿ ವಿದ್ಯೆ ಕಲಿಸಿದ ಗುರುಗಳನ್ನ ಸಾಮಾನ್ಯವಾಗಿ ವಿದ್ಯಾರ್ಥಿ ಜೀವನಕ್ಕೆ ಮಾತ್ರ ಸೀಮಿತವಿಡುತ್ತೇವೆ. ಅಭ್ಯಾಸವಧಿಯ ನಂತರ ಶಿಕ್ಷಕರನ್ನು ಮರೆತುಬಿಡುವುದು ಲೋಕರೂಡಿಯಾಗಿದೆ. . ಹೌದು, ದಿನನಿತ್ಯ ಜೀವನದ ಹಲವಾರು ಪ್ರಸಂಗಗಳಲ್ಲಿ ಹಾಗೂ ಕಷ್ಟ ಕಾರ್ಪಣ್ಯಗಳ ನಡುವೆ ನಮಗೆ ಸಲಹೆ-ಸೂಚನೆಗಳು, ಮಾರ್ಗದರ್ಶನ ಬೇಕೆನಿಸಿದ್ದಲ್ಲಿ ಹೊಸದಾಗಿ ಪರಿಚಯವಾದ ಸುತ್ತಮುತ್ತಲಿನ ವ್ಯಕ್ತಿಗಳನ್ನು ಕೇಳುತ್ತೇವೆ ಮತ್ತು ಅವರ ಸಲಹೆಯನ್ನು ಪಾಲಿಸುತ್ತೇವೆ ಕೂಡ. ತದನಂತರ ಕೆಲವೊಮ್ಮೆ ಅಯ್ಯೋ... ಅವರ ಮಾತು ಕೇಳಬಾರದಿತ್ತು ಅಂತ ಪೇಚಾಡುವ ಪ್ರಸಂಗ ಸಹ ನೋಡಿರುತ್ತೇವೆ. ಆದರೆ ನಮಗೆ ಬಾಲ್ಯದಿಂದ ನಿಸ್ವಾರ್ಥವಾಗಿ ಕಲಿಸಿದ ಒಬ್ಬ ಗುರುವಿನ ಸಲಹೆ ಪಡೆಯೋಣ ಎಂಬ ಕನಿಷ್ಠ ಮನೋಭಾವನೆ ಬರುವುದಿಲ್ಲ. . ಗುರುಗಳ ಸಲಹೆ, ಮಾರ್ಗದರ್ಶನ ಪಡೆಯದಿದ್ದರೆ ಬಿಡಿ; ಅಪರೂಪಕ್ಕಾದರೂ ನಮಗಿಷ್ಟವೆನಿಸಿದ್ದ ಗುರುವಿಗೆ ಕರೆ ಮಾಡಿ " ಹೇಗಿದ್ದೀರಾ ಸರ್ / ಮೇಡಂ...? " ಎಂದು ಕೇಳುವ ಕನಿಷ್ಠ ಸೌಜನ್ಯವೂ ನಮಗಿಲ್ಲವಾಗಿದೆ. . ಅಲ್ಲಿ ಇಲ್ಲಿ ಪರಿಚಯವಾದ ಅಥವಾ ನೆರೆಹೊರೆಯ ವ್ಯಕ್ತಿಗಳ ಜೊತೆ ರಕ್ತ ಸಂಬಂದಿಗಳಿಗಿಂತ ಹೆಚ್ಚಿನ ತರ ಯಾವಾಗಲೂ ಒಡನಾಟ ಇಟ್ಟುಕೊಳ್ಳುತ್ತೇವೆ, ಸಂಪೂರ್ಣ ನಂಬುತ್ತೇವೆ, ಅವರಿಗೆ ಕಷ್ಟ ಎಂದಾಗ ಹಗಲು-ರಾತ್ರಿ ಬಿಸಿಲು-ಮಳೆ-ಗಾಳಿ-ಚಳಿ ಎನ್ನದೆ ಎದ್ದು ಬಿದ್ದು ಓಡಾಡುತ್ತೇವೆ, ಕೈಲಾದ ಸಹಾಯ ಮಾಡುತ್ತೇವೆ, ಮುಗಿಬಿದ್ದು ಅವರ ಹುಟ್ಟು ಹಬ್ಬ ಆಚರಿಸುತ್ತೇವೆ, ಹಬ್ಬ...
Comments
Post a Comment
ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ